ಗೌರವ ಡಾಕ್ಟರೇಟ್ ನಿರಾಕರಿಸಿದ ದ್ರಾವಿಡ್

Update: 2017-01-25 16:58 GMT

ಬೆಂಗಳೂರು, ಜ.25: ಬೆಂಗಳೂರು ವಿವಿಯ ಗೌರವ ಡಾಕ್ಟರೇಟ್‌ನ್ನು ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ನಿರಾಕರಿಸಿದ್ದಾರೆ.

ಜ.27ರಂದು ಬೆಂಗಳೂರು ವಿವಿಯ 52ನೆ ಘಟಿಕೋತ್ಸವದಲ್ಲಿ ರಾಹುಲ್ ಡ್ರಾವಿಡ್ ಅವರಿಗೆ ಮಾತ್ರ ಗೌರವ ಡಾಕ್ಟರೇಟ್ ನೀಡಲು ರಾಜ್ಯಪಾಲರು ಸಮ್ಮತಿ ನೀಡಿದ್ದರು.

ಗೌರವ ಡಾಕ್ಟರೇಟ್‌ಗೆ ಆಯ್ಕೆಯಾಗಿದ್ದ ಮೂವರ ಹೆಸರನ್ನು ವಿವಿ ಹಿಂದೆ ರಾಜ್ಯಪಾಲರಿಗೆ ಕಳುಹಿಸಿತ್ತು. ಈ ಪೈಕಿ ರಾಹುಲ್ ಡ್ರಾವಿಡ್ ಅವರಿಗೆ ಮಾತ್ರ ಗೌರವ ಡಾಕ್ಟರೇಟ್ ನೀಡಲು ಸಮ್ಮತಿ ನೀಡಿದ ರಾಜ್ಯಪಾಲರು ಉಳಿದ ಇಬ್ಬರ ಹೆಸರನ್ನು ತಿರಸ್ಕರಿಸಿದ್ದರು ಎಂದು ತಿಳಿದು ಬಂದಿದೆ.

ರಾಹುಲ್ ದ್ರಾವಿಡ್ ಗೌರವ ಡಾಕ್ಟರೇಟ್‌ಗೆ ಆಯ್ಕೆಯಾಗಿರುವುದನ್ನು ವಿವಿ ತಿಳಿಸಿದಾಗ ರಾಹುಲ್ ದ್ರಾವಿಡ್ ಡಾಕ್ಟರೇಟ್ ಪಡೆಯಲು ನಿರಾಕರಿಸಿದರು ಎನ್ನಲಾಗಿದೆ. ಗೌರವ ಡಾಕ್ಟರೇಟ್ ಬೇಡ. ಸಂಶೋಧನೆ ಮಾಡಿಯೇ ಪಿಎಚ್‌ಡಿ ಪಡೆಯುವುದಾಗಿ ರಾಹುಲ್ ದ್ರಾವಿಡ್ ವಿವಿಗೆ ತಿಳಿಸಿರುವುದಾಗಿ ಟಿವಿ ಮಾದ್ಯಮಗಳು ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News