ಕೇರಳದಲ್ಲಿ ಗೂಂಡಾರಾಜ್: ಬಿಜೆಪಿ

Update: 2017-02-18 10:06 GMT

ಕೋಟ್ಟಯಂ,ಫೆ. 18: ಪ್ರಮುಖ ನಟಿಯನ್ನು ಅಪಹರಿಸಿದ ಘಟನೆ ಕೇರಳದಲ್ಲಿ ಗೂಂಡಾರಾಜ್ ಇರುವುದನ್ನು ತೋರಿಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕುಮ್ಮನಂ ರಾಜಶೇಖರನ್ ಹೇಳಿದ್ದಾರೆ. ಮಹಿಳೆಯರು ಮತ್ತು ಪರಿಶಿಷ್ಟಜಾತಿಯವರ ವಿರುದ್ಧ ಕಿರುಕುಳ ಕೇರಳದಲ್ಲಿ ಹೆಚ್ಚಳಗೊಳ್ಳುತ್ತಿದೆ. ಮುಖ್ಯಮಂತ್ರಿ ಮತ್ತು ಗೃಹಸಚಿಚಾಲಯ ಆಕ್ರಮಣಗಳನ್ನು ಪ್ರೋತ್ಸಾಹಿಸುತ್ತಿದ್ದಾರೆ. ವಿವಿಧ ಅಕ್ರಮ ಘಟನೆಗಳಿಗೆ ಸಂಬಂಧಿಸಿ ಕಳೆದ ಏಳು ತಿಂಗಳಲ್ಲಿ 60 ಎಫ್‌ಐಆರ್‌ಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಆದರೆಯಾವ ಪ್ರಕರಣದಲ್ಲಿಯೂ ಆರೋಪಿಗಳನ್ನು ಬಂಧಿಸಲು ಪೊಲೀಸರಿಂದಾಗಿಲ್ಲ. ಜನರ ಜೀವ, ಸೊತ್ತುಗಳಿಗೆ ರಕ್ಷಣೆ ನೀಡಲು ಸಾಧ್ಯವಾಗದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರಾಜಿನಾಮೆ ನೀಡಬೇಕೆಂದು ಕುಮ್ಮನಂ ಆಗ್ರಹಿಸಿದ್ದಾರೆ.

ಲಾ ಅಕಾಡಮಿಯ ಸಮಸ್ಯೆಗಳಿಗೆ ಸಂಬಂಧಿಸಿ ತನಿಖೆ ನಡೆಸಲು ಬಂದ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಸುಷ್ಮಾ ಸಾಹುರನ್ನು ರಾಜ್ಯಸರಕಾರ ಕಡೆಗಣಿಸಿದೆ ಎಂದು ಅವರು ಆರೋಪಿಸಿದ್ದಾರೆ. ಅವರಿಗೆ ಪ್ರಯಾಣ ಸೌಕರ್ಯವೋ ವಾಸಸೌಕರ್ಯವನ್ನೋ ಕೇರಳ ಸರಕಾರ ಒದಗಸಲಿಲ್ಲ. ಪೊಲೀಸರು ಕೂಡಾ ನಕಾರಾತ್ಮಕವಾಗಿ ವರ್ತಿಸಿದ್ದಾರೆ ಎಂದು ಕುಮ್ಮನಂ ಹೇಳಿದರು.

ಲವ್ಲಿನ್ ಪ್ರಕರಣದಲ್ಲಿ ಸಿಬಿಐ ವಿರುದ್ಧ ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ಎತ್ತಿರುವ ಆರೋಪ ಸರಿಯಲ್ಲ. ಪ್ರಕರಣ ನಡೆಸುವ ವಿಷಯದಲ್ಲಿ ಸಿಬಿಐಯಿಂದ ಯಾವುದೆ ನಿರ್ಲಕ್ಷ್ಯವಾಗಿಲ್ಲ. ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರ ವಕೀಲ ಎಂಕೆ. ದಾಮೋದರನ್‌ರು ಅಸೌಖ್ಯದಿಂದ ಮಲಗಿದ್ದಲ್ಲೇ ಆಗಿದ್ದಾರೆ. ಆದ್ದರಿಂದ ಕೋರ್ಟಿನಲ್ಲಿ ಅವರಿಗೆ ಹಾಜರಾಗಲು ಸಾಧ್ಯವಾಗಿಲ್ಲ. ಆದ್ದರಿಂದ ಕೇಸನ್ನು ಮುಂದೂಡಲಾಗಿದೆ. ಮಾರ್ಚ್ ಒಂಬತ್ತಕ್ಕೆ ಕೇಸನ್ನು ಪುನಃ ಕೋರ್ಟು ಪರಿಶೋಧಿಸಲಿದೆ ಎಂದು ಕುಮ್ಮನಂ ರಾಜಶೇಖರನ್ ಹೇಳಿದರು ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News