ಕಾವೇರಿ ನ್ಯಾಯಾಧಿಕರಣದ ಅಧ್ಯಕ್ಷರಾಗಿ ಸುಪ್ರೀಂ ನ್ಯಾಯಾಧೀಶ ಸಪ್ರೆ ನೇಮಕ

Update: 2017-02-21 17:31 GMT

ಹೊಸದಿಲ್ಲಿ,ಫೆ.21: ಕಾವೇರಿ ಜಲ ವಿವಾದಗಳ ನ್ಯಾಯಾಧಿಕರಣದ ಅಧ್ಯಕ್ಷರಾಗಿ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶ ನ್ಯಾ.ಅಭಯ ಮನೋಹರ ಸಪ್ರೆ ಅವರನ್ನು ನೇಮಕಗೊಳಿಸಲಾಗಿದೆ. ಹಾಲಿ ಕಾನೂನು ಆಯೋಗದ ಅಧ್ಯಕ್ಷರಾಗಿರುವ ನ್ಯಾ.ಬಿ.ಎಸ್.ಚೌಹಾಣ್ ಅವರು ಕಳೆದ ವರ್ಷದ ಮಾರ್ಚ್‌ನಲ್ಲಿ ನ್ಯಾಯಾಧಿಕರಣದ ಅಧ್ಯಕ್ಷತೆಗೆ ರಾಜೀನಾಮೆ ನೀಡಿದಾಗಿನಿಂದಲೂ ಈ ಹುದ್ದೆ ತೆರವಾಗಿಯೇ ಇತ್ತು.

ತಮಿಳುನಾಡು,ಕರ್ನಾಟಕ,ಕೇರಳ ಮತ್ತು ಪುದುಚೇರಿ ರಾಜ್ಯಗಳನ್ನು ತನ್ನ ಜಲಾನಯನ ಪ್ರದೇಶದಲ್ಲಿ ಒಳಗೊಂಡಿರವ ಕಾವೇರಿ ನದಿಗೆ ಸಂಬಂಧಿಸಿದ ಜಲವಿವಾದಗಳ ಇತ್ಯರ್ಥಕ್ಕಾಗಿ ಕೇಂದ್ರ ಸರಕಾರವು 1990ರಲ್ಲಿ ಈ ನ್ಯಾಯಾಧಿಕರಣವನ್ನು ರಚಿಸಿತ್ತು.

ಎನ್.ಎಸ್.ರಾವ್ ಮತ್ತು ನ್ಯಾ.ಅಗರವಾಲ್ ಅವರು ನ್ಯಾಯಾಧಿಕರಣದ ಇತರ ಇಬ್ಬರು ಸದಸ್ಯರಾಗಿದ್ದಾರೆ.

1954,ಆ.28ರಂದು ಜನಿಸಿದ ಸಪ್ರೆ 2014,ಆ.13ರಂದು ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾಗಿ ಅಧಿಕಾರ ಸ್ವೀಕರಿಸಿದ್ದು, 2019,ಆ.27ರಂದು ನಿವೃತ್ತರಾಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News