ಪೊರ್ಬ್ಸ್ ಪಟ್ಟಿಯ 19 ದೇಶಗಳು ಮುಖೇಶ್ ಅಂಬಾನಿಗಿಂತ ಬಡವರು!
ಹೊಸದಿಲ್ಲಿ,ಫೆ. 24: ಮುಖೇಶ್ ಅಂಬಾನಿ ಭಾರತದ ಅತಿದೊಡ್ಡ ಶ್ರೀಮಂತ. ಆದರೆ ಅವರ ಬಳಿ ಹಲವು ದೇಶಗಳಿಗಿಂತ ಹೆಚ್ಚು ಸಂಪತ್ತಿದೆ. ಪೋರ್ಬ್ಸ್‌ನ ಒಂದು ವರದಿ ಪ್ರಕಾರ ಮುಖೇಶ್‌ಗಿಂತ 19 ದೇಶಗಳು ಬಡತನದ್ದಾಗಿದೆ. ಅವುಗಳ ಜಿಡಿಪಿ ಮುಖೇಶ್ ಅಂಬಾನಿ ಮುಂದೆ ಏನೇನೂ ಅಲ್ಲ. ಇದರಲ್ಲಿ ಭಾರತದ ಎರಡು ನೆರೆಯ ದೇಶಗಳಾದ ಅಫ್ಘಾನಿಸ್ತಾನಮತ್ತು ನೇಪಾಲ ಸೇರಿದೆ. ಇದಲ್ಲದೆ ಈ ಲಿಸ್ಟ್‌ನಲ್ಲಿ ಕೆಲವು ಯುರೋಪಿಯನ್ ಮತ್ತು ಆಫ್ರಿಕನ್ ದೇಶಗಳೂ ಇವೆ.
ಮುಖೇಶ್ ಅಂಬಾನಿಯ ಒಟ್ಟು ಆಸ್ತಿ 23.1 ಅರಬ್ ಡಾಲರ್:
ಮುಖೇಶ್ ಅಂಬಾನಿಯ ಒಟ್ಟು ಆಸ್ತಿ ಈವೇಳೆ 23.1 ಅರಬ್ ಡಾಲರ್‌ಆಗಿದೆ. ಆದರೆ ಈ ಕೆಳಗಿನ ದೇಶಗಳ ಜಿಡಿಪಿ 23 ಅರಬ್ ಡಾಲರ್‌ಗಿಂತ ಕಡಿಮೆಯಿದೆ. ಜೊತೆಗೆ ಭಯಾನಕ ಹಸಿವು ,ಬಡತನದಿಂದ ಬಳಲುತ್ತಿವೆ.
ಅಲ್ಬೇನಿಯ, ಜಿಡಿಪಿ 12.1, ನಿಕರಾಗುಹ ಜಿಡಿಪಿ 13.4,ಲಾವೋಸ್ ಜಿಡಿಪಿ 13.8, ಜಮೈಕಾ 13.8, ಮಾಲಿ 14.1, ಜಿಂಬಾಬ್ವೆ, 14.1 ಜಾರ್ಜಿಯ, 13.5, ಗೆಬಾನ್ ಐಸ್‌ಲೆಂಡ್ 14.6, ಸೆನೆಗಲ್ 14.9, ಬೋಸ್ನಿಯ 16.5, ಅಫ್ಘಾನಿಸ್ತಾನ 16.4,ಕಂಬೋಡಿಯ 19.4, ಐಸ್‌ಲೆಂಡ್ 19.4, ಪಪುಅ ನ್ಯೂಗಿನಿ 19.9, ಸೈಪ್ರೆಸ್ 19.9, ಜಾಂಬಿಯ 20,.6, ಹೊಂಡುರಾಸ್ 20.9, ನೇಪಾಲ 21.2, ಟ್ರಿನಿಡಾಡ್ ಆಂಡ್ ಟೊಬ್ಯಾಗೊ 22.8 ಜಿಡಿಪಿ ಹೊಂದಿದ್ದು ಅಂಬಾನಿಗಿಂತ ಕಡಿಮೆ ಆಸ್ತಿಯನ್ನು ಹೊಂದಿದ ರಾಷ್ಟ್ರಗಳೆಂದು ವರದಿ ತಿಳಿಸಿದೆ.