ಪತ್ನಿಯನ್ನು ಜೀವಂತ ಸುಟ್ಟ ಭೂಪ !

Update: 2017-03-04 09:29 GMT

ಅಲಿಗಡ,ಮಾ.4: ಉತ್ತರಪ್ರದೇಶ ಪೊಲೀಸರು ಅಂತಿಮ ಸಂಸ್ಕಾರ ನಡೆಸುತ್ತಿದ್ದ ಅರೆಬೆಂದುಹೋದ ಯುವತಿಯ ಶವವನ್ನು ಚಿತೆಯಿಂದ ಹೊರ ತೆಗೆದಿದ್ದಾರೆ. ಯುವತಿಯ ಕುಟುಂಬಸ್ಥರು ಯುವತಿಯ ಪತಿ ಆಕೆಯನ್ನು ಜೀವಂತವಾಗಿ ಸುಟ್ಟುಹಾಕಿದ್ದಾನೆಂದು ಆರೋಪಿಸಿದ್ದರಿಂದ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆಂದು ಟೈಮ್ಸ್ ಆಫ್ ಇಂಡಿಯ ವರದಿಮಾಡಿದೆ.

ರಚನಾ ಸಿಸೋಡಿಯ(24) ಎನ್ನುವ ಯುವತಿಯನ್ನು ಜೀವಂತ ಇರುವಾಗಲೇ ಆಕೆಯನ್ನು ಚಿತೆಯಲ್ಲಿಟ್ಟು ಸುಟ್ಟಿದ್ದಾನೆ ಎನ್ನಲಾಗಿದೆ. ನೋಯಿಡದ ಆಸ್ಪತ್ರೆಯಲ್ಲಿ ಈ ಯುವತಿ ಮೃತಪಟ್ಟಿದ್ದಾಳೆಂದು ವೈದ್ಯರು ಮರಣ ದೃಢಪತ್ರ  ನೀಡಿದ್ದರು. ಫೆ.25ಕ್ಕೆ ಆಕೆ ‘ಮೃತಪಟ್ಟಿದ್ದಳು’.

ಮರುದಿವಸ ಅವಳ ಅಂತಿಮಸಂಸ್ಕಾರ ನಡೆಸಲಾಗಿದೆ. ಆದರೆ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಚಿತೆಯಲ್ಲಿ ಸುಡುವಾಗ ಆಕೆ ಜೀವಂತವಿದ್ದಳು ಎಂದು ಸಾಬೀತಾಗಿದೆ. ಚಿತೆಯಲ್ಲಿ ಉರಿಯುವಾಗ ಆಕೆ ಉಸಿರಾಡುತ್ತಿದ್ದಳೆಂದು ಮರಣೋತ್ತರ ಪರೀಕ್ಷೆಯಲ್ಲಿ ಪತ್ತೆಯಾಗಿದೆ.

ಪೊಲೀಸರು ಕುಟುಂಬಸ್ಥರ ಆರೋಪದ ಪ್ರಕಾರ ಯುವತಿಯ ನ್ನು ಚಿತೆಯಿಂದ ಹೊರತೆಗೆದಾಗ ಶೇ.70ರಷ್ಟು ಆಕೆ ಸುಟ್ಟುಹೋಗಿದ್ದಳು.ಕಳೆದ ವರ್ಷ ಡಿಸೆಂಬರ್ 13ಕ್ಕೆ ರಚನಾ ನಾಪತ್ತೆಯಾಗಿದ್ದಳು, ಪೊಲೀಸರು ಅವಳ ಪತಿ ದೇವೇಶ್ ಚೌಧರಿ923) ಮತ್ತು ಇತರ ಹನ್ನೊಂದು ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದರು.

ರಚನಾಳ ಸೋದರ ಮಾವ ಕೈಲಾಶ್ ಸಿಂಗ್ ರು" ನಾವು ರಚನಾಳನ್ನು ಬಹಳ ಕಡೆ ಹುಡುಕಿದ್ದೆವು. ಆಕೆ ಎಲ್ಲಿಯೂ ಪತ್ತೆಯಾಗಿರಲಿಲ್ಲ. ಕೊನೆಗೆ ಆಕೆ ದೇವೇಶ್‌ನ ಜೊತೆಗೆ ಇರುವುದು ಗೊತ್ತಾಗಿತ್ತು. ನಾವು ಅಲಿಗಡದ ಅವರ ಗ್ರಾಮಕ್ಕೆ ಹೋದಾಗ ಅಕೆ ಅಲ್ಲೆಲ್ಲಿಯೂ ಸಿಕ್ಕಿರಲಿಲ್ಲ" ಎಂದು ಹೇಳಿದ್ದಾರೆ. ನೆರೆಯವರು ರಚನಾ ಮತ್ತು ದೇವೇಶ್ ಮದುವೆಯ ಬಳಿಕ ಹೆಚ್ಚು ಸಮಯ ಅಲಿಗಡದಲ್ಲಿರಲಿಲ್ಲ. ಅವರು ನೊಯ್ಡಾಕ್ಕೆ ಮನೆ ಬದಲಾಯಿಸಿದ್ದರು ಎಂದು ಹೇಳುತ್ತಾರೆ.

ಪೊಲೀಸರು ರಚನಾಳ ಕುಟುಂಬಸ್ಥರ ದೂರನ್ನು ಸ್ವೀಕರಿಸಿದ್ದು, ಪ್ರಕರಣದಲ್ಲಿ ಆಕೆಯ ಪತಿ ದೇವೇಶ್ ಮತ್ತು ಇತರ 11 ಮಂದಿ ವಿರುದ್ಧ ಕೇಸು ದಾಖಲಿಸಿದ್ದಾರೆ. ಆರೋಪಿ ಪರಾರಿಯಾಗಿದ್ದಾನೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News