ಎತ್ತಿನ ಬಂಡಿಯಲ್ಲಿ ವಿಧಾನಸಭೆಗೆ ಬಂದ ಮಹಾರಾಷ್ಟ್ರ ಶಾಸಕ!
Update: 2017-03-06 16:23 GMT
ಮುಂಬೈ,ಮಾ.6: ಮಹಾರಾಷ್ಟ್ರ ವಿಧಾನಸಭೆಯ ಬಜೆಟ್ ಅಧಿವೇಶನದ ಮೊದಲ ದಿನವಾದ ಸೋಮವಾರ ಪುಣೆ ಜಿಲ್ಲೆಯ ಭೋಸಾರಿಯ ಬಿಜೆಪಿ ಶಾಸಕ ಮಹೇಶ ಲಾಂಡ್ಗೆ ಅವರು ಎತ್ತಿನ ಬಂಡಿಯಲ್ಲಿ ಆಗಮಿಸುವ ಮೂಲಕ ರಾಜ್ಯದಲ್ಲಿ ಎತ್ತಿನ ಬಂಡಿಗಳ ಓಟದ ಸ್ಪರ್ಧೆಗಳ ಮೇಲಿನ ನಿಷೇಧವನ್ನು ತಕ್ಷಣ ರದ್ದುಗೊಳಿಸುವಂತೆ ಆಗ್ರಹಿಸಿದರು. ಸಚಿವಾಲಯ ಕಟ್ಟಡ ಮಂತ್ರಾಲಯದ ಸಮೀಪ ಪೊಲೀಸರು ಅವರನ್ನು ತಡೆದು ನಿಲ್ಲಿಸಿದರು.
ಗ್ರಾಮೀಣ ಕ್ರೀಡೆಗಳ ಹಂಗಾಮು ಸಮೀಪಿಸುತ್ತಿದ್ದು, ಎತ್ತಿನ ಬಂಡಿಗಳ ಓಟದ ಸ್ಪರ್ಧೆಗಳ ಪುನರಾರಂಭಕ್ಕೆ ಗ್ರಾಮೀಣ ಜನರು ತೀವ್ರ ಆಸಕ್ತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ತಾನು ಈ ಸಾಂಕೇತಿಕ ಪ್ರತಿಭಟನೆಯನ್ನು ನಡೆಸಿದ್ದೇನೆ ಎಂದು ಲಾಂಡ್ಗೆ ಹೇಳಿದರು.
ಮಹಾರಾಷ್ಟ್ರದಲ್ಲಿ 2011ರಿಂದ ಎತ್ತಿನ ಬಂಡಿಗಳ ಓಟದ ಸ್ಪರ್ಧೆಯನ್ನು ನಿಷೇಧಿಸಲಾಗಿದೆ.