2019ರಲ್ಲೂ ಮೋದಿಯನ್ನು ಸೋಲಿಸುವ ಯಾವುದೇ ನಾಯಕನಿಲ್ಲ: ಒಮರ್ ಅಬ್ದುಲ್ಲಾ

Update: 2017-03-11 08:18 GMT

ಹೊಸದಿಲ್ಲಿ, ಮಾ.11: ಪಂಚರಾಜ್ಯಗಳ ವಿಧಾನಸಭಾ ಚುನಾವಣೆಗಳ ಫಲಿತಾಂಶ ಗಳನ್ನು ಗಮನಿಸಿದರೆ, 2019ರ ಲೋಕಸಭಾ ಚುನಾವಣೆಯಲ್ಲೂ ನರೇಂದ್ರ ಮೋದಿಯನ್ನು ಸೋಲಿಸುವ ಯಾವುದೇ ನಾಯಕನಿರುವುದಿಲ್ಲ ಎಂದು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಶನಿವಾರ ಭವಿಷ್ಯ ನುಡಿದಿದ್ದಾರೆ.

ಪಂಜಾಬ್‌ನಲ್ಲಿ ಕಾಂಗ್ರೆಸ್‌ನ ಸಂಭಾವ್ಯ ಗೆಲುವು, ಗೋವಾದಲ್ಲಿ ಈವರೆಗಿನ ಉತ್ತಮ ಎನ್ನಬಹುದಾದ ಪ್ರದರ್ಶನ ಮತ್ತು ಮಣಿಪುರದಲ್ಲಿ ತೀವ್ರ ಸ್ಪರ್ಧೆಯನ್ನೊಡ್ಡಿರುವುದು ಬಿಜೆಪಿಯನ್ನು ಸೋಲಿಸುವುದು ಅಸಾಧ್ಯವೇನಲ್ಲ ಎನ್ನುವುದನ್ನು ತೋರಿಸಿದೆ ಎಂದಿದ್ದಾರೆ.

ಪ್ರತಿಪಕ್ಷಗಳ ಚುನಾವಣಾ ಕಾರ್ಯತಂತ್ರ ಟೀಕೆಗಳಿಂದ ಧನಾತ್ಮಕ ಪರ್ಯಾಯದತ್ತ ಮುಖ ಮಾಡಬೇಕಾದ ಅಗತ್ಯವಿದೆ ಎಂದು ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಯೂ ಆದ ಅಬ್ದುಲ್ಲಾ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News