ಕಟ್ಟಡ ಕಾರ್ಮಿಕರ ಬಗ್ಗೆ ತಿಳಿಯಲು ಸ್ವತಃ ಕಾರ್ಮಿಕನಾದ ಉಮರ್‌ನ ಯುಟ್ಯೂಬ್ ವೀಡಿಯೊ ಹಿಟ್
ಮನಾಮ,ಮಾ.18: ಬಹ್ರೈನಿನ ಉಮರ್‌ಫಾರೂಕ್ ಕಟ್ಟಡ ಕಾರ್ಮಿಕರ ಕಷ್ಟ ತಿಳಿಯಲು ಸ್ವಯಂ ಕಟ್ಟಡ ಕಾರ್ಮಿಕನಾಗಿದುಡಿದಿದ್ದಾನೆ. ಅವರ ಹತ್ತಿರದಲ್ಲಿದ್ದು ಸುಖ, ಕಷ್ಟಗಳನ್ನು ನೋಡಿ ವೀಡಿಯೊ ಮಾಡಿ ಯೂಟ್ಯೂಬ್‌ಗೆ ಪೋಸ್ಟ್ ಮಾಡಿದ್ದಾನೆ. ಉಮರ್ ಫಾರೂಕ್ನ ವೀಡಿಯೊ ಹಿಟ್‌ಆಗಿದೆ.
ಉಮರ್ ಕಟ್ಟಡ ಕಾರ್ಮಿಕನಾಗಲು ಕಟ್ಟಡ ಕಾರ್ಮಿಕರು ಬಳಸುವ ಶೂ,ಟಿಫಿನ್ ಬಾಕ್ಸ್ ಇಂತಹ ಅಗತ್ಯವಿರುವ ವಸ್ತುಗಳನ್ನೆಲ್ಲ ಖರೀದಿಸಿದ್ದಾನೆ. ಒಂದು ದಿವಸ ಬೆಳಗ್ಗೆ ಬಸ್ ಹತ್ತಿ ಕಾರ್ಮಿಕರ ಕೆಲಸದ ಸ್ಥಳಕ್ಕೆ ಬಂದಿದ್ದಾನೆ. ಒಂದು ಹಂತದಲ್ಲಿ ನಕಲಿ ಕಾರ್ಮಿಕ ಸಿಕ್ಕಿಬೀಳುವ ಸ್ಥಿತಿಯವರೆಗೂ ಹೋಗಿದ್ದ. ತಾನು ಬಹ್ರೈನ್‌ನಲ್ಲಿ ವಾಸಿಸುವಜೋರ್ಡಾನ್ನ ಬಡ ವ್ಯಕ್ತಿಎಂದು ಹೇಳಿ ಪಾರಾಗಿದ್ದಾನೆ. ಹೀಗೆ ಕಷ್ಟಪಟ್ಟು ತಯಾರಿಸಿದ ವೀಡಿಯೊ ಯೂಟ್ಯೂಬ್‌ನಲ್ಲಿ ಜನಪ್ರಿಯವಾಗಿದೆ.
ಉಮರ್‌ಫಾರೂಕ್‌ಗೆ ಕೇವಲ 21 ವರ್ಷ ವಯಸ್ಸು. ಸಮೂಹ ಸಂವಹನ ಪತ್ರಿಕೋದ್ಯಮದಲ್ಲಿ ಪದವಿಗಳಿಸಿದ್ದಾನೆ. ಹೆಚ್ಚಿನ ಕಟ್ಟಡಕಾರ್ಮಿಕರು ಪರಿಸ್ಥಿತಿಯ ಅನಿವಾರ್ಯತೆಗೆ ಸಿಲುಕಿ ಈ ಕ್ಷೇತ್ರವನ್ನು ಸೇರಿದ್ದಾರೆಂದು ಉಮರ್ ಹೇಳುತ್ತಿದ್ದಾನೆ. ಉಷ್ಣ,ಗಾಳಿ, ಚಳಿ ಇವೆಲ್ಲ ತಡೆದು ಉಮರ್ ಫಾರೂಕ್ ಕೂಡಾ ಕೆಲಸ ಮಾಡಿ ಕಾರ್ಮಿಕರ ಸುಖ ದುಃಖ ಕಷ್ಟಗಳನ್ನು ಅನುಭವ ಮಾಡಿಕೊಂಡಿದ್ದಾನೆ. ಉಮರ್ ಕಷ್ಟ ಅನುಭವಿಸುತ್ತಿರುವವರ ವೀಡಿಯೊ ತಯಾರಿಸಿ ಉಮರ್ ಟ್ರೈಸ್ ಎನ್ನುವ ಸರಣಿಯಲ್ಲಿ ಯುಟ್ಯೂಬ್ ಅಪ್ ಡೇಟ್ ಮಾಡುತ್ತಿದ್ದಾನೆ.