ಟ್ವಿಟ್ಟರ್‌ನಲ್ಲಿ ಉತ್ತರಪ್ರದೇಶದ ನೂತನ ಮುಖ್ಯಮಂತ್ರಿ ಹೋಲುವ ಪ್ರಸಿದ್ದ ವ್ಯಕ್ತಿ ಪ್ರತ್ಯಕ್ಷ!

Update: 2017-03-19 05:42 GMT

ಹೊಸದಿಲ್ಲಿ, ಮಾ.19: ಗೋರಖ್‌ಪುರದ ವಿವಾದಿತ ಸಂಸದ ಯೋಗಿ ಆದಿತ್ಯನಾಥ್‌ರನ್ನು ಬಿಜೆಪಿ ಶಾಸಕಾಂಗ ಸಭೆಯಲ್ಲಿ ಶನಿವಾರ ಉತ್ತರಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿತ್ತು. ಆದಿತ್ಯನಾಥ್‌ರ ಆಯ್ಕೆ ಕೆಲವರಿಗೆ ಆಘಾತ ತಂದರೆ, ಇನ್ನು ಕೆಲವರು ಅವರ ಆಯ್ಕೆಯನ್ನು ಸ್ವಾಗತಿಸಿದ್ದರು. ಮತ್ತೊಂದೆಡೆ, ಆದಿತ್ಯನಾಥ್ ಹಾಗೂ ಅವರನ್ನೇ ಹೋಲುವ ವ್ಯಕ್ತಿಯೊಬ್ಬರ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲಾರಂಭಿಸಿದೆ.

ಉತ್ತರಪ್ರದೇಶ ಹೊಸ ಸಿಎಂ ಹಾಗೂ ಐದು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಯೋಗಿ ಆದಿತ್ಯನಾಥ್ ಹಾಗೂ ಹಾಲಿವುಡ್ ನಟ ವಿನ್ ಡಿಜೆೆಲ್ ಪರಸ್ಪರ ಹೋಲಿಕೆಯಲ್ಲಿ ಅಣ್ಣ-ತಮ್ಮಂದಿರ ಹಾಗಿದ್ದಾರೆ. ಶನಿವಾರ ಸಂಜೆಯೇ ಆದಿತ್ಯನಾಥ್-ಡಿಜೆೆಲ್ ಫೋಟೊ ಟ್ವಿಟ್ಟರ್‌ನಲ್ಲಿ ಹಾಕಿರುವ ಕೆಲವರು ತಮಾಷೆಯ ಟ್ವೀಟ್‌ಗಳನ್ನು ಮಾಡಿದ್ದಾರೆ.

 ವಿನ್ ಡಿಜೆಲ್ ಎಂದು ಪ್ರಸಿದ್ಧರಾಗಿರುವ ಅಮೆರಿಕದ ನಟ, ನಿರ್ಮಾಪಕ ಮಾರ್ಕ್ ಸಿಂಕ್ಲೆರ್ ಪ್ರಸ್ತುತ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರೊಂದಿಗೆ ಹಾಲಿವುಡ್ ಚಿತ್ರವೊಂದರಲ್ಲಿ ನಟಿಸುತ್ತಿದ್ದು, ಭಾರತೀಯರಿಗೆ ಹೆಚ್ಚು ಪರಿಚಿತ ಮುಖವಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News