ಶ್ರೀಲಂಕಾ ನೌಕಾಪಡೆಯಿಂದ 10 ಭಾರತೀಯ ಮೀನುಗಾರರ ಸೆರೆ

Update: 2017-03-21 15:56 GMT

ರಾಮೇಶ್ವರಂ,ಮಾ.21: ಕಛತೀವು ಸಮೀಪ ಮೀನುಗಾರಿಕೆಯಲ್ಲಿ ನಿರತರಾಗಿದ್ದ 10 ಭಾರತೀಯ ಮೀನುಗಾರರನ್ನು ಅಂತರರಾಷ್ಟ್ರೀಯ ಜಲಗಡಿಯನ್ನು ದಾಟಿದ ಆರೋಪದಲ್ಲಿ ಮಂಗಳವಾರ ಶ್ರೀಲಂಕಾ ನೌಕಾಪಡೆಯು ಬಂಧಿಸಿದೆ ಎಂದು ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಕುಳಂಜಿನಾಥನ್ ಅವರು ಇಲ್ಲಿ ತಿಳಿಸಿದರು.

ಇಲ್ಲಿಗೆ ಸಮೀಪದ ತಂಗಚ್ಚಿಮಾಡಂ ನಿವಾಸಿಗಳಾದ ಈ ಮೀನುಗಾರರನ್ನು ಅವರ ದೋಣಿಗಳ ಸಹಿತ ಕಂಕೆಸಂತುರೈಗೆ ಒಯ್ಯಲಾಗಿದೆ ಎಂದರು.

ಮಾ.6ರಂದು ಕಛತೀವು ಬಳಿ ಯಾಂತ್ರೀಕೃತ ದೋಣಿಯ ಮೂಲಕ ಮೀನುಗಾರಿಕೆ ನಡೆಸುತ್ತಿದ್ದ ಭಾರತೀಯ ಮೀನುಗಾರ ಬ್ರಿದ್ಗೋ(22) ಶ್ರೀಲಂಕಾ ನೌಕಾಪಡೆಯ ಗುಂಡಿಗೆ ಬಲಿಯಾಗಿದ್ದು, ಸರವಣನ್‌ಎಂಬಾತ ಗಾಯಗೊಂಡಿದ್ದ. ಈ ಘಟನೆಗೆ ತಮಿಳುನಾಡು ಮೀನುಗಾರರು ವ್ಯಾಪಕ ಪ್ರತಿಭಟನೆಯನ್ನು ವ್ಯಕ್ತಪಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News