ಸಂಸ್ಕೃತ ಕಲಿಕೆಯತ್ತ ಹೆಚ್ಚಿದ ಆಸಕ್ತಿ

Update: 2017-03-27 12:42 GMT

ಹೊಸದಿಲ್ಲಿ, ಮಾ.27: ರಾಷ್ಟ್ರೀಯ ಸಂಸ್ಕೃತ ಸಂಸ್ಥಾನ, ರಾಷ್ಟ್ರೀಯ ಸಂಸ್ಕೃತ ವಿದ್ಯಾಪೀಠದಂತಹ ಸಂಸ್ಕೃತ ಕಲಿಸುವ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ನೋಂದಣಿ ಪ್ರಕ್ರಿಯೆ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿದೆ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ (ಎಚ್‌ಆರ್‌ಡಿ) ಸಚಿವಾಲಯ ತಿಳಿಸಿದೆ.

 ಲೋಕಸಭೆಯಲ್ಲಿ ಲಿಖಿತ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದ ಎಚ್‌ಆರ್‌ಡಿ ಇಲಾಖೆಯ ಸಹಾಯಕ ಸಚಿವ ಉಪೇಂದ್ರ ಕುಶ್ವಾಲಾ, ಸಂಸ್ಕೃತ ಕಲಿಯಲು ಆಸಕ್ತರಾಗಿರುವ ವಿದ್ಯಾರ್ಥಿಗಳ ದತ್ತಾಂಶ ಮಾಹಿತಿ ಅಥವಾ ಸಂಸ್ಕೃತ ಶಿಕ್ಷಕರ ಸಂಖ್ಯೆಯ ಬಗ್ಗೆ ಮಾಹಿತಿಯನ್ನು ಇಲಾಖೆ ಸಂಗ್ರಹಿಸಿಲ್ಲ ಎಂದರು. ಸಂಸ್ಕೃತ ಕಲಿಯಲು ಆಸಕ್ತಿ ತೋರಿ ನೋಂದಣಿ ಮಾಡಿಕೊಳ್ಳುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಪ್ರತೀ ವರ್ಷ ಹೆಚ್ಚುತ್ತಿದೆ ಎಂದು ಹೊಸದಿಲ್ಲಿಯ ರಾಷ್ಟ್ರೀಯ ಸಂಸ್ಕೃತಿ ಸಂಸ್ಥಾನ ಮತ್ತು ಲಾಲ್ ಬಹಾದುರ್ ಶಾಸ್ತ್ರಿ ರಾಷ್ಟ್ರೀಯ ಸಂಸ್ಕೃತ ವಿದ್ಯಾಪೀಠ , ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿದ್ಯಾಪೀಠ ಮಾಹಿತಿ ನೀಡಿದೆ ಎಂದು ಅವರು ತಿಳಿಸಿದರು. ಶಿಕ್ಷಾ ಶಾಸ್ತ್ರಿ(ಬಿಎಡ್) ಮತ್ತು ಶಿಕ್ಷಾ ಆಚಾರ್ಯ(ಎಂಎಡ್) ಶಿಕ್ಷಣ ಪೂರೈಸಿದವರಿಗೆ ಸರಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಸಂಸ್ಕೃತ ಶಿಕ್ಷಕರಾಗಲು ಹೆಚ್ಚಿನ ಅವಕಾಶವಿದೆ ಎಂದು ಸಚಿವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News