ನ್ಯಾಯಾಲಯದಲ್ಲಿ ಪತ್ರಕರ್ತರ ಉಡುಗೆಯ ಬಗ್ಗೆ ಬಾಂಬೆ ಹೈಕೋರ್ಟ್ ಅಸಮಾಧಾನ

Update: 2017-03-30 08:27 GMT

ಮುಂಬೈ, ಮಾ.30: ಜೀನ್ಸ್ ಹಾಗೂ ಟೀ-ಶರ್ಟ್‌ಗಳನ್ನು ಧರಿಸಿ ನ್ಯಾಯಾಲಯದ ಪ್ರಕ್ರಿಯೆಯನ್ನು ವರದಿ ಮಾಡಲು ಬಂದಿರುವ ಪತ್ರಕರ್ತರ ಬಗ್ಗೆ ಬಾಂಬೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದ್ದು, ಇದು ‘ಬಾಂಬೆ ಸಂಸ್ಕೃತಿಯೇ’ ಎಂದು ಪ್ರಶ್ನಿಸಿದೆ.

ಮಹಾರಾಷ್ಟ್ರದಲ್ಲಿ ವೈದ್ಯರು ಮುಷ್ಕರದಲ್ಲಿ ಭಾಗಿಯಾಗಿದ್ದನ್ನು ವಿರೋಧಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯ ವೇಳೆ ಮುಖ್ಯ ನ್ಯಾಯಾಧೀಶೆ ಮಂಜುಳಾ ಚೆಲ್ಲಾರ್ ಹಾಗೂ ಜಸ್ಟಿಸ್ ಜಿ.ಎಸ್. ಕುಲಕರ್ಣಿ ಅವರಿದ್ದ ನ್ಯಾಯಪೀಠ ಪತ್ರಕರ್ತರ ವಸ್ತ್ರಸಂಹಿತೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ರಾಷ್ಟ್ರೀಯ ದಿನಪತ್ರಿಕೆಯ ಪತ್ರಕರ್ತರು ಜೀನ್ಸ್ ಹಾಗೂ ಟೀ-ಶರ್ಟ್‌ನ್ನು ಧರಿಸಿ ನ್ಯಾಯಾಲಯದ ಪ್ರಕ್ರಿಯೆಗಳನ್ನು ವರದಿ ಮಾಡಲು ಬಂದಿರುವುದನ್ನು ಗಮನಿಸಿದ ನ್ಯಾಯಪೀಠ ಪತ್ರಕರ್ತರಿಗೆ ಯಾವುದೇ ವಸ್ತ್ರಸಂಹಿತೆಯೇ ಇದೆಯೇ ಎಂದು ತಿಳಿಯಲು ಬಯಸುವುದಾಗಿ ತಿಳಿಸಿತು.

ಇದು ‘ಬಾಂಬೆ ಸಂಸ್ಕೃತಿಯ’ ಭಾಗವಾಗವೇ ಎಂದು ಪ್ರಶ್ನಿಸಿದ ಜಸ್ಟಿಸ್ ಚೆಲ್ಲಾರ್, ಪರ್ತಕರ್ತರಿಗೆ ಯಾವುದಾದರೂ ವಸ್ತ್ರಸಂಹಿತೆ ಇದೆಯೇ ಎಂದು ಬಿಎಂಸಿ ವಕೀಲ ಎಸ್.ಎಸ್. ಪಕಾಲೆಯನ್ನು ಕೇಳಿದರು. ಇದಕ್ಕೆ ಪಕಾಲೆ ನಕಾರಾತ್ಮಕವಾಗಿ ಉತ್ತರಿಸಿದರು.

ನ್ಯಾಯಾಲಯಗಳಿಗೆ ಇಂತಹ ಉಡುಪುಗಳನ್ನು ಧರಿಸಿ ಬರುವುದು ಗೌರವ ಸೂಚಕವೇ ಎಂದು ತಿಳಿಯಲು ತಾನು ಬಯಸಿದ್ದೇನೆ ಎಂದು ಜಸ್ಟಿಸ್ ಚೆಲ್ಲಾರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News