ಮತ್ತೆ ಕರ್ತವ್ಯಕ್ಕೆ ಹಾಜರಾದ ‘ತೂಕದ’ ಪೋಲಿಸ್

Update: 2017-04-13 07:54 GMT

ನೀಮಚ್, ಎ. 13: ಪ್ರಸಿದ್ಧ ಬರಹಗಾರ್ತಿ ಶೋಭಾ ಡೆ ಟ್ವೀಟ್ ಮಾಡಿದ ಬಳಿಕ ಚರ್ಚೆಗೆ ತುತ್ತಾಗಿದ್ದ 180 ಕೆಜಿ ತೂಕದ ಮಧ್ಯಪ್ರದೇಶದ ಪೊಲೀಸ್ ಇನ್ಸ್‌ಪೆಕ್ಟರ್ ದೌಲತ್ ರಾಮ್ ಜೊಗಾವತ್ ನಿಮಚ್‌ನ ಪೊಲೀಸ್ ಲೈನ್‌ಗೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಮುಂಬೈಯ ಸೈಫಿ ಆಸ್ಪತ್ರೆಯಲ್ಲಿ ಜೊಗಾವತ್‌ಗೆ ಮಾರ್ಚ್ 2ರಂದುಸರ್ಜರಿ ನಡೆಸಲಾಗಿತ್ತು. ಮಾರ್ಚ್8ಕ್ಕೆ ಅವರು ನಿಮಚ್‌ಗೆ ಬಂದಿದ್ದಾರೆ. ಅಲ್ಲಿಂದ ಅವರು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. 41 ದಿವಸಗಳಲ್ಲಿ 15ಕೆಜಿ ಭಾರ ಕಡಿಮೆಯಾಗಿದ್ದು, ಈಗ 164ಕೆ.ಜಿ.ಗೆ ಅವರ ಭಾರ ಇಳಿಕೆಯಾಗಿದೆ. ವರ್ಷದಲ್ಲಿ 80ಕೆ.ಜಿಯಷ್ಟು ಭಾರವನ್ನು ಅವರುಕಳಕೊಳ್ಳಲಿದ್ದಾರೆ ಎನ್ನಲಾಗಿದೆ.

-ಇನ್ಸ್‌ಪೆಕ್ಟರ್ ದೌಲತ್‌ರಾಮ್ ಜೊಗಾವತ್ ಭಾರ ಒಂದು ತಿಂಗಳಲ್ಲಿ 15ಕೆಜಿ ಕಡಿಮೆಯಾಗಿದೆ. ಈಗ ಅವರು ಆರಾಮವಾಗಿ ಬೈಕ್ ಚಲಾಯಿಸುತ್ತಿದ್ದಾರೆ.

-ಜೊಗಾವತ್ ಸರ್ಜರಿಯ ನಂತರ ಲಿಕ್ವಿಡ್ ಡಯಟ್‌ಗೆ ಒಳಪಡಿಸಲಾಗಿತ್ತು. ಬೆಳಗ್ಗೆ ಉಪ್ತಹಾರದಲ್ಲಿ ಹೆಸರು ಕಾಳಿನ ಬೇಳೆ, ಪಪ್ಪಾಯಿ ಜೂಸ್, ಮಜ್ಜಿಗೆ ಸೇವಿಸುತ್ತಿದ್ದರು. -ದೌಲತ್ ರಾಮ್ ಜೊಗಾವತ್, ಈತ ತಾನು ತುಂಬ ಆರಾಮವಾಗಿದ್ದೇನೆ ಎಂದು ಅನಿಸುತ್ತಿದ್ದೇನೆ ಎಂದು ಹೇಳುತ್ತಿದ್ದಾರೆ. ವೈದ್ಯರು ಹೇಳಿದ ಪ್ರಕಾರವೇ ನಾನು ಆಹಾರಕ್ರಮವನ್ನು ತೆಗೆದುಕೊಳ್ಳುತ್ತಿದ್ದೇನೆ. ಈಗ ನಾನು ನಡೆದು ಹೋಗುತ್ತಿದ್ದೇನೆ. ನನ್ನ ಆರೋಗ್ಯ ಹಿಂದಿಗಿಂತ ಎಷ್ಟೊ ಉತ್ತಮವಾಗಿದೆ ಎಂದು ಅವರು ಹೇಳಿದ್ದಾರೆ.

 - ಬೆರಿಯೋಟ್ರಿಕ್ ಸರ್ಜನ್ ಡಾ. ಮುಫಝಲ್ ಲಕಡ್‌ವಾಲರ ಒಂದು ವರ್ಷದಲ್ಲಿ ಜೊಗಾವತ್ 80 ಕೆ.ಜಿ.ಭಾರವನ್ನು ಕಡಿಮೆ ಮಾಡಿಕೊಳ್ಳಲಿದ್ದಾರೆ ಎಂದು ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಅವರಿಗೆ ಬೊಜ್ಜಿನ ಜೊತೆ ಡಯಾಬಿಟಿಸ್ ಕೂಡಾ ಇತ್ತು. ಅನಿಡ್ರಾ, ಲಂಫಡಿಮ ಮತ್ತು ಹೈಪರ್‌ಟೆನ್ಶನ್‌ನಂತಹ ರೋಗಗಳು ಇದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News