ಹಿಂದಿ ಕಡ್ಡಾಯಕ್ಕೆ ಮೋದಿ ಸರಕಾರ ಪ್ರಯತ್ನಿಸುತ್ತಿದೆ: ಸ್ಟಾಲಿನ್

Update: 2017-04-23 12:28 GMT

ಚೆನ್ನೈ,ಎ. 23: ನರೇಂದ್ರಮೋದಿ ಸರಕಾರದ ವಿರುದ್ಧ ತೀಕ್ಷ್ಣ ಟೀಕೆ ಮಾಡಿರುವ ಡಿಎಂಕೆ ಕಾರ್ಯಾಧ್ಯಕ್ಷ ಸ್ಟಾಲಿನ್, ಮೋದಿ ಸರಕಾರ ದೇಶದ ಒಗ್ಗಟ್ಟನ್ನು ಕೆಡವುವ ಕೆಲಸವನ್ನು ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಹಿಂದಿಯನ್ನು ಅಧಿಕೃತ ಭಾಷೆಗೊಳಿಸಬೇಕು ಎನ್ನುವ ಪಾರ್ಲಿಮೆಂಟರಿ ಸಮಿತಿಯ ಶಿಫಾರಸಿನ ಹಿನ್ನೆಲೆಯಲ್ಲಿ ಪ್ರಧಾನಿ ವಿರುದ್ಧ ಅವರು ಕಟು ಶಬ್ದಗಳನ್ನು ಬಳಸಿದ್ದಾರೆ.

ಕೇಂದ್ರ ಸರಕಾರ ಒಂದು ಹೆಜ್ಜೆ ಮುಂದೆ ಹೋಗಿ ಸಿಬಿಎಸ್‌ಇ ಶಾಲೆಗಳಲ್ಲಿಹಿಂದಿಭಾಷೆಯನ್ನು ಕಡ್ಡಾಯಗೊಳಿಸಿತು. ಪ್ರಾಥಮಿಕ ಶಾಲೆಯಿಂದ ಪಾರ್ಲಿಮೆಂಟ್‌ವರೆಗೆ ಹಿಂದಿ ಭಾಷೆಯನ್ನುಕಡ್ಡಾಯಗೊಳಿಸುವುದುಸರಕಾರದ ಉದ್ದೇಶವಾಗಿದೆ. ಈ ರೀತಿ ಹಿಂದಿಭಾಷೆ ಮಾತನಾಡದ ಜನರ ಭಾವಿ ತಲೆಮಾರನ್ನು ವಂಚಿಸುವ ಕೆಲಸವನ್ನು ಬಿಜೆಪಿಸರಕಾರ ಮಾಡುತ್ತಿದೆ ಎಂದು ಸ್ಟಾಲಿನ್ ಆರೋಪಿಸಿದರು.

ಹಿಂದಿ ಕಡ್ಡಾಯ ಗೊಳಿಸುವುದನ್ನು ಶಕ್ತಿಶಾಲಿಯಾಗಿ ವಿರೋಧಿಸಿದ ಚರಿತ್ರೆ ದ್ರಾವಿಡ ಸಂಸ್ಕೃತಿಗೆ ಇದೆ ಎಂದು ಸ್ಟಾಲಿನ್ ನೆನಪಿಸಿದರು. ಪ್ರಾದೇಶಿಕ ಭಾಷೆಗಳನ್ನು ಸಂರಕ್ಷಿಸುವುದಕ್ಕಾಗಿ ಜೀವಕೊಟ್ಟಹುತಾತ್ಮರು ಇಲ್ಲಿದ್ದಾರೆ. ಇಂದಿನ ಮೂರನೆ ತಲೆಮಾರು ಹಿಂದಿ ವಿರುದ್ಧ ಪ್ರತಿಭಟನೆ ನಡೆಸುವ ಅನಿವಾರ್ಯತೆಯನ್ನು ಕೇಂದ್ರ ಸರಕಾರ ಸೃಷ್ಟಿಸಬಾರದೆಂದು ಸ್ಟಾಲಿನ್ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News