ಯುನೈಟೆಡ್ ಏರ್‌ಲೈನ್ಸ್‌ನಿಂದ ಇನ್ನು 6.41 ಲಕ್ಷ ಕೊಡುಗೆ
Update: 2017-04-27 14:34 GMT
ನ್ಯೂಯಾರ್ಕ್, ಎ. 27: ನಿಗದಿಗಿಂತ ಹೆಚ್ಚು ಟಿಕೆಟ್‌ಗಳು ಮಾರಾಟವಾದ ವಿಮಾನಗಳಲ್ಲಿ ತಮ್ಮ ಟಿಕೆಟ್‌ಗಳನ್ನು ರದ್ದುಪಡಿಸಲು ಸ್ವಯಂಪ್ರೇರಿತವಾಗಿ ಮುಂದಾಗುವ ಪ್ರಯಾಣಿಕರಿಗೆ 10,000 ಡಾಲರ್ (ಸುಮಾರು 6.41 ಲಕ್ಷ ರೂಪಾಯಿ)ವರೆಗೆ ಪರಿಹಾರ ಒದಗಿಸಲಾಗುವುದು ಎಂದು ಅಮೆರಿಕದ ವಿಮಾನಯಾನ ಕಂಪೆನಿ ಯುನೈಟೆಡ್ ಏರ್‌ಲೈನ್ಸ್ ಗುರುವಾರ ಹೇಳಿದೆ
ಇತ್ತೀಚೆಗೆ ನಿಗದಿಗಿಂತ ಹೆಚ್ಚು ಪ್ರಯಾಣಿಕರು ತುಂಬಿದ್ದ ವಿಮಾನದಿಂದ ಓರ್ವ ಪ್ರಯಾಣಿಕನನ್ನು ನೆಲದಲ್ಲಿ ದರ ದರನೆ ಎಳೆದುಕೊಂಡುಹೋಗಿ ಹೊರ ಹಾಕಿ ವಿಶ್ವಾದ್ಯಂತ ಛೀಮಾರಿ ಹಾಕಿಸಿಕೊಂಡಿರುವ ಏರ್‌ಲೈನ್ಸ್ ಈಗ ಈ ಕ್ರಮಕ್ಕೆ ಮುಂದಾಗಿದೆ.