ಬಿಜೆಪಿ ಸಂಸದನ ಹನಿಟ್ರಾಪ್ ಪ್ರಕರಣ: ಆರೋಪಿ ವಕೀಲೆಯ ಬಂಧನ

Update: 2017-05-02 14:27 GMT

  ಹೊಸದಿಲ್ಲಿ,ಮೇ2: ಗುಜರಾತ್‌ನ ಬಿಜೆಪಿ ಸಂಸದ ಕೆ.ಸಿ.ಪಟೇಲ್‌ರನ್ನು ಹನಿಟ್ರಾಪ್ ಮಾಡಿ, 5 ಕೋಟಿ ರೂ. ನೀಡುವಂತೆ ಅವರಿಗೆ ಬ್ಲಾಕ್‌ಮೇಲ್ ಮಾಡಿದ್ದಳೆನ್ನಳಾದ ಮಹಿಳಾ ನ್ಯಾಯವಾದಿಯೊಬ್ಬಳನ್ನು ದಿಲ್ಲಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

   ಆರೋಪಿ ಮಹಿಳೆಯನ್ನು ಇಂದು ಬೆಳಗ್ಗೆ ದಿಲ್ಲಿಯ ನಾರ್ತ್ ಆವೆನ್ಯೂ ಪೊಲೀಸ್ ಠಾಣೆಗೆ ವಿಚಾರಣೆಗಾಗಿ ಕರೆತರಲಾಗಿತ್ತು. ಸಂಸದ ಪಟೇಲ್ ತನ್ನ ಮೇಲೆ ಹಲವು ಬಾರಿ ಅತ್ಯಾಚಾರವೆಸಗಿದ್ದರೆಂದು ಆಕೆ ಕಳೆದ ವಾರ ಆರೋಪಿಸಿದ್ದಳು. ಆದಾಗ್ಯೂ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿ ತಕ್ಷಣವೇ ಎಫ್‌ಐಆರ್ ದಾಖಲಿಸಿರಲಿಲ್ಲ.

ಘಟನೆಗೆ ಸಂಬಂಧಿಸಿ ಇಂದು ಪೊಲೀಸರು ಆಕೆಯನ್ನು ಕೂಲಂಕಷವಾಗಿ ಪ್ರಶ್ನಿಸಿದ್ದರು. ಆದರೆ ಆಕೆ. ಹೇಳಿಕೆಗಳು ವಿರೋಧಾಭಾಸಗಳಿಂದ ಕೂಡಿರುವುದನ್ನು ತಿಳಿದ ಪೊಲೀಸರು ಆಕೆಯನ್ನು ಇನ್ನಷ್ಟು ವಿಚಾರಣೆಗೊಳಪಡಿಸಿದ್ದರು.

 ಸಂಸದ ಪಟೇಲ್, ಆಕೆಯ ನಿವಾಸಕ್ಕೆ ಆಗಮಿಸಿದ್ದ ದಿನದ ಸಂಪೂರ್ಣ ಘಟನಾವಳಿಗಳನ್ನು ವಿವರಿಸುವ ತನಿಖಾಧಿಕಾರಿಗಳು ಆಕೆಗೆ ತಿಳಿಸಿದ್ದರು. 2015ನೆ ಇಸವಿಯಿಂದೀಚೆಗೆ ಆಕೆಗೆ ಪಟೇಲ್ ಜೊತೆ ಇತ್ತೆನ್ನಲಾದ ಸ್ನೇಹದ ಬಗ್ಗೆಯೂ ಪೊಲೀಸರು ಪ್ರಶ್ನಿಸಿದ್ದರು. ಅಷ್ಟೇ ಅಲ್ಲದೆ, ಆಕೆಯ ಮಲಗುವ ಕೊಠಡಿಯಲ್ಲಿ ಯಾಕೆ ಕ್ಯಾಮರಾಗಳನ್ನು ಅಳವಡಿಸಲಾಗಿದೆಯೆಂದು ಪ್ರಶ್ನಿಸಲಾಗಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

ತನ್ನ ವಿರುದ್ಧ ಮಹಿಳಾ ನ್ಯಾಯವಾದಿ ಕಳೆದ ವಾರ ದಿಲ್ಲಿ ಪೊಲೀಸರಿಗೆ ದೂರು ನೀಡಿದ ಬಳಿಕ ಗುಜರಾತ್‌ನ ವಲ್ಸಾಡ್ ಕ್ಷೇತ್ರದ ಸಂಸದರಾದ ಕೆ.ಸಿ.ಪಟೇಲ್ ಆಕೆಯ ವಿರುದ್ದ ಪ್ರತಿ ದೂರು ನೀಡಿದ್ದರು. ಯುವತಿಯು ತನಗೆ ನೀಡಿದ್ದ ಅಮಲುಪದಾರ್ಥ ಬೆರೆಸಲ್ಪಟ್ಟಿದ್ದ ಪಾನೀಯವೊಂದನ್ನು ಸೇವಿಸಿದ ಬಳಿಕ ತಾನು ಪ್ರಜ್ಞೆ ತಪ್ಪಿ ಬಿದ್ದಿದ್ದೆ. ಆಗ ಯುವತಿಯು ತನ್ನ ಆಕ್ಷೇಪಾರ್ಹ ಭಂಗಿಗಳ ಛಾಯಾಚಿತ್ರಗಳನ್ನು ತೆಗೆದಿರುವುದಾಗಿ ಅವರು ಆರೋಪಿಸಿದ್ದರು.

  ಅವರು ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಇದೊಂದು ಸುಲಿಗೆ ಪ್ರಕರಣವೆಂದು ದಾಖಲಿಸಿಕೊಂಡಿದ್ದಾರೆ.

 ಆರೋಪಿ ಮಹಿಳೆಯು 2016ರ ಸೆಪ್ಟೆಂಬರ್‌ನಲ್ಲಿಯೂ ಹರ್ಯಾಣದ ಸಂಸದರೊಬ್ಬರ ವಿರುದ್ಧ ತಿಲಕ್‌ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತರುವಾಯ ಆಕೆ ತನ್ನ ದೂರನ್ನು ಹಿಂತೆಗೆದುಕೊಂಡಿದ್ದಳು. ಆಕೆಯ ಪೂರ್ವಾಪರಗಳ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ನ್ಯಾಯವಾದಿಯಾಗಿ ತನ್ನ ಅರ್ಹತೆಗೆ ಂಬಂದಿಸಿದಿ ವಿವಗಳನ್ನು ನೀಡುವಂತೆಯೂ ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News