ತ್ರಿವಳಿ ತಲಾಖ್:ಸಲ್ಮಾನ್ ಖುರ್ಷಿದ್ ಸಲಹೆಗಾರನಾಗಲು ಸುಪ್ರೀಂ ಒಪ್ಪಿಗೆ
Update: 2017-05-03 14:03 GMT
ಹೊಸದಿಲ್ಲಿ,ಮೇ 3: ಮುಸ್ಲಿಂ ಸಮುದಾಯದಲ್ಲಿನ ತ್ರಿವಳಿ ತಲಾಖ್, ನಿಕಾ ಹಲಾಲ ಮತ್ತು ಬಹುಪತ್ನಿತ್ವ ಪದ್ಧತಿಗಳ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯಲ್ಲಿ ನ್ಯಾಯಾಲಯದ ಸಲಹೆಗಾರನಾಗಿ ನೆರವಾಗಲು ಮಾಜಿ ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ ಅವರಿಗೆ ಸರ್ವೋಚ್ಚ ನ್ಯಾಯಾಲಯವು ಬುಧವಾರ ಒಪ್ಪಿಗೆ ನೀಡಿತು.
ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್ ನೇತೃತ್ವದ ಪೀಠವು ಪ್ರಕರಣದಲ್ಲಿ ತನ್ನ ಲಿಖಿತ ಹೇಳಿಕೆಗಳನ್ನೂ ಸಲ್ಲಿಸಲು ಹಿರಿಯ ನ್ಯಾಯವಾದಿಯಾಗಿರುವ ಖುರ್ಷಿದ್‌ಗೆ ಅನುಮತಿ ನೀಡಿತು.
ಐವರು ನ್ಯಾಯಾಧೀಶರ ಪೀಠವು ಮೇ 11ರಿಂದ ಈ ಅರ್ಜಿಗಳ ವಿಚಾರಣೆಯನ್ನು ಆರಂಭಿಸಲಿದೆ.