ಸಿಹಿ

Update: 2017-10-02 18:41 GMT
Editor : -ಮಗು

1948ರ ಸಮಯ. ಒಂದು ಓಣಿಯಲ್ಲಿ ಯಾರೋ ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದರು. ಆತ ದಲಿತ ಹುಡುಗ. ಏನೋ ಉತ್ಸವವಿರಬೇಕು ಎಂದು ಓಡಿದ. ಅಲ್ಲಿ ಸಿಹಿ ಹಂಚುತ್ತಿದ್ದರು. ಹುಡುಗ ಒಂದು ಲಡ್ಡು ತಿಂದು, ನಾಲ್ಕೈದು ಲಡ್ಡನ್ನು ಮನೆಗೆಂದು ಒಯ್ದ.
ಅದೊಂದು ಗುಡಿಸಲು. ಲಡ್ಡು ದುಬಾರಿ ತಿಂಡಿ. ತಂದೆ ಕೇಳಿದ ‘‘ಎಲ್ಲಿ ಸಿಕ್ಕಿತೋ ಈ ಲಡ್ಡು?’’
‘‘ಓ ಅಲ್ಲಿ, ಖಾಕಿ ಚೆಡ್ಡಿ ಹಾಕಿ ಕವಾಯತು ನಡೆಸುತ್ತಾರಲ್ಲ ಅಲ್ಲಿ. ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದರು. ಒಂದು ಲಡ್ಡು ನಾನು ಅಲ್ಲೇ ತಿಂದೆ’’
ತಂದೆ ಆಘಾತದಿಂದ ಕುಸಿ ದರು. ‘‘ಅಯ್ಯೋ ಪಾಪಿ...ಆ ಮಹಾತ್ಮ ಗಾಂಧಿಯನ್ನು ಕೊಂದ ಖುಷಿಯಲ್ಲಿ ಹಂಚಿದ ಲಡ್ಡನ್ನು ತಿಂದು ಬಿಟ್ಟು ಶಾಶ್ವತ ನೀಚನಾಗಿ ಬಿಟ್ಟೆಯಲ್ಲೋ...ಕಿಸೆಯಲ್ಲಿರುವುದನ್ನು ಎಸೆದು ಬಿಡೋ...’’ ಎಂದವನೇ ಮಗನ ಗಂಟಲಿಗೆ ಕೈ ಹಾಕಿ ವಾಂತಿ ಮಾಡಿಸಿದ.
ಹುಡುಗ ಗೋಡೆಯಲ್ಲಿದ್ದ ಗಾಂಧಿಯನ್ನು ನೋಡಿದ. ಇನ್ನೆಂದೂ ನನ್ನ ಜೀವಮಾನದಲ್ಲಿ ಸಿಹಿ ತಿನ್ನಲಾರೆ ಎಂದು ಶಪಥ ಮಾಡಿದ.

 

Writer - -ಮಗು

contributor

Editor - -ಮಗು

contributor

Similar News

ಬೆಲೆ
ದಾಂಪತ್ಯ
ಶಾಂತಿ
ಬೆಳಕು
ಮಾನ್ಯತೆ!
ವ್ಯಾಪಾರ
ಆಕ್ಸಿಜನ್
ಝಲಕ್
ಸ್ವರ್ಗ
ಪ್ರಾರ್ಥನೆ
ಗೊಂದಲ!
ಆ ಚಿಂತಕ!