ಉಪಯೋಗ
Update: 2017-12-15 18:52 GMT
ಸರಕಾರ ಬೇರೆ ಬೇರೆ ಮೂಲಗಳಿಂದ ಜನರಿಂದ ತೆರಿಗೆ ವಸೂಲು ಮಾಡಲು ಶುರು ಹಚ್ಚಿತು.
ಜನರು ‘‘ದೇಶಕ್ಕೆ ಒಳ್ಳೆಯದಾಗಲಿ’’ ಎಂದು ತೆಪ್ಪಗೆ ತೆರಿಗೆ ಪಾವತಿ ಮಾಡ ತೊಡಗಿದರು.
ಸರಕಾರ ಅದರಿಂದ ಶಸ್ತ್ರಾಸ್ತ್ರ ಸಂಗ್ರಹಿಸ ತೊಡಗಿತು. ಓಹ್...ಶತ್ರು ದೇಶಕ್ಕಿಂತ ನಮ್ಮ ದೇಶ ಬಲಾ್ಯವಾಯಿತು ಎಂದು ಜನರು ಬೀಗಿದರು.
ಆದರೆ ಬಡತನ ಹೆಚ್ಚಿತು. ಜನರು ಅತೃಪ್ತರಾದರು. ಬಡವರು ದುಡಿದದ್ದೆಲ್ಲ ಶ್ರೀಮಂತರ ತಿಜೋರಿ ಸೇರಿತು. ಕೊನೆಗೆ ಜನರು ಸರಕಾರದ ವಿರುದ್ಧ ಬಂಡೆದ್ದರು.
ಜನರ ತೆರಿಗೆಯಿಂದ ಸಂಗ್ರಹಿಸಿದ ಶಸ್ತ್ರಾಸ್ತ್ರಗಳೆಲ್ಲ ಈಗ ಉಪಯೋಗಕ್ಕೆ ಬಂದವು.