ಮರ್ಯಾದೆ

Update: 2018-01-04 18:42 GMT
Editor : -ಮಗು

ಆಕೆ ಅನ್ಯ ಧರ್ಮೀಯನ ಜೊತೆಗೆ ಓಡಿ ಹೋದಳು.

ಊರಿಡೀ ಸುದ್ದಿ. ಯುವಕರೆಲ್ಲ ಆ ಮನೆಯ ಮುಂದೆ ನೆರೆದರು. ‘‘ನಮ್ಮ ಜಾತಿ, ಧರ್ಮದ ಮರ್ಯಾದೆ ತೆಗೆದಿರಿ....ನಿಮ್ಮ ಮಗಳನ್ನು ಹದ್ದು ಬಸ್ತಿನಲ್ಲಿಡಲು ಯಾಕೆ ಸಾಧ್ಯವಾಗಿಲ್ಲ...’’ ಯರ್ರಾಬಿರ್ರಿ ಪ್ರಶ್ನಿಸತೊಡಗಿದರು.
ವೃದ್ಧ ತಂದೆ ಅವರ ಮಾತನ್ನು ಕೇಳಿ ಮೆಲ್ಲಗೆ ಒಳ ಹೋದ. ಬರುವಾಗ ಅವರ ಇನ್ನೂ ಮೂವರು ತರುಣಿಯರನ್ನು ಕರೆದುಕೊಂಡು ಬಂದ. ಎಲ್ಲರೂ ಮದುವೆಯ ಪ್ರಾಯದ ತರುಣಿಯರು. ವೃದ್ಧ ಮೃದುವಾಗಿ ಹೇಳಿದ ‘‘ಹೋದವಳು ಹೋಗಲಿ. ಅವಳಿನ್ನು ನನ್ನ ಪಾಲಿಗೆ ಇಲ್ಲ. ಇದೀಗ ಈ ಮೂವರು ಹುಡುಗಿಯರು ಓಡಿ ಹೋಗದೆ ಉಳಿದಿದ್ದಾರೆ. ನಿಮ್ಮಲ್ಲಿ ಯಾರು ಮದುವೆಯಾಗುವುದಾದರೂ ಸರಿ, ಮದುವೆ ಮಾಡಿ ಕೊಡುವೆ. ಬನ್ನಿ, ನಿಮ್ಮ ಧರ್ಮದ ಮರ್ಯಾದೆ ಉಳಿಸಿ’’
ಬುದ್ಧಿ ಹೇಳಲು ಬಂದ ತರುಣರು ಒಬ್ಬೊಬ್ಬರೇ ಜಾಗ ಖಾಲಿ ಮಾಡಿದರು.

 

Writer - -ಮಗು

contributor

Editor - -ಮಗು

contributor

Similar News

ಬೆಲೆ
ದಾಂಪತ್ಯ
ಶಾಂತಿ
ಬೆಳಕು
ಮಾನ್ಯತೆ!
ವ್ಯಾಪಾರ
ಆಕ್ಸಿಜನ್
ಝಲಕ್
ಸ್ವರ್ಗ
ಪ್ರಾರ್ಥನೆ
ಗೊಂದಲ!
ಆ ಚಿಂತಕ!