100ನೇ ಉಪಗ್ರಹವನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದ ಇಸ್ರೋ

Update: 2018-01-12 05:19 GMT

ಹೊಸದಿಲ್ಲಿ, ಜ.12: ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಪಿಎಸ್‌ಎಲ್‌ವಿಸಿ40 ಮೂಲಕ ತನ್ನ 100ನೇ ಉಪಗ್ರಹವನ್ನು ಇಸ್ರೋ ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ.

ಶುಕ್ರವಾರ ಬೆಳಗ್ಗೆ 9:28ಕ್ಕೆ ಪಿಎಸ್‌ಎಲ್‌ವಿಸಿ40 ಮೂಲಕ 710 ಕೆಜಿ ತೂಕದ ಕಾರ್ಟೊಸೆಟ್-2 ಸಿರೀಸ್ ಹಾಗೂ ಇತರ 30 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲಾಯಿತು.

 ಅಮೆರಿಕ, ಫ್ರಾನ್ಸ್, ಇಂಗ್ಲೆಂಡ್, ಕೆನಡಾ, ರಿಪಬ್ಲಿಕ್ ಆಫ್ ಕೊರಿಯಾ ಹಾಗೂ ಫಿನ್‌ಲ್ಯಾಂಡ್‌ನ 28 ವಿದೇಶಿ ಉಪಗ್ರಹ ಸಹಿತ ಒಟ್ಟು 30 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲಾಯಿತು. ಈ ಮೂಲಕ ಇಸ್ರೋ 100ನೇ ಉಪಗ್ರಹವನ್ನು ಕಕ್ಷೆ ಸೇರಿಸಿದ ಸಾಧನೆ ಮಾಡಿತು.

ಪಿಎಸ್‌ಎಲ್‌ವಿಸಿ40 ಒಟ್ಟು 1323 ಕೆಜಿ ತೂಕದ ಉಪಗ್ರಹವನ್ನು ಹೊತ್ತೊಯ್ದು ಕಕ್ಷೆಗೆ ಸೇರಿಸಿದೆ.

ಈ ಐತಿಹಾಸಿಕ ಕ್ಷಣಕ್ಕೆ ಇಸ್ರೋದ ಉನ್ನತ ಅಧಿಕಾರಿಗಳಾದ ಇಸ್ರೋ ಅಧ್ಯಕ್ಷ ಎಎಸ್ ಕಿರಣ್ ಕುಮಾರ್, ವಿಎಸ್‌ಎಸ್‌ಸಿ ನಿರ್ದೇಶಕ ಕೆ. ಶಿವಂ, ಎಲ್‌ಪಿಎಸ್‌ಸಿ ನಿರ್ದೇಶಕ ಸೋಮ್‌ನಾಥ್, ಎಸ್‌ಡಿಎಸ್‌ಸಿ ಡೈರೆಕ್ಟರ್ ಕುನ್ಹಿ ಕೃಷ್ಣನ್, ಐಎಸ್‌ಎಸಿ ನಿರ್ದೇಶಕ ಅಣ್ಣಾದೊರೈ ಸಾಕ್ಷಿಯಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News