ದಾರಿ
Update: 2018-01-12 18:25 GMT
ಅದೊಂದು ದಾರಿ. ಯಾರೇ ಆ ಹಾದಿಯಲ್ಲಿ ಬಂದರೂ ಆತ ‘‘ಆ ದಾರಿಯಲ್ಲಿ ಹೋಗಬೇಡಿ...’’ ಎಂದು ತಡೆಯುತ್ತಿದ್ದ. ಆ ದಾರಿಯಲ್ಲಿ ಹೋಗುವ ವರು ಬೇರೆ ದಾರಿ ಹಿಡಿದು ಹೋಗುತ್ತಿದ್ದರು.
ಹೀಗಿರಲು ಒಬ್ಬ ಕೇಳಿದ ‘‘ಈ ದಾರಿಯಲ್ಲಿ ಹೋದರೆ ಏನಾಗುತ್ತದೆ’’
‘‘ಹಾಗಾದರೆ ಹೋಗಿ...’’ ಎಂದ ಆತ.
ದಾರಿ ಹೋಕ ಮುಂದೆ ಹೋದ.
ಕೆಲ ದಿನಗಳ ಬಳಿಕ ದಾರಿ ಹೋಕ ಆತನ ಬಳಿ ಬಂದು ಕೇಳಿದ ‘‘ಆ ದಾರಿಯಲ್ಲಿ ಹೋದೆ. ನನಗೆ ಏನೂ ಆಗಲಿಲ್ಲ. ನೀವು ಯಾಕೆ ಹಾಗೆ ಹೇಳಿದಿರಿ?’’
ಅವನು ನಕ್ಕು ಹೇಳಿದ ‘‘ಅದು ನಗರದ ಕಡೆಗಿರುವ ಕಾಲ್ನಡಿಗೆ ದಾರಿ. ಬೇರೆ ದಾರಿಯಾದರೆ ನಗರಕ್ಕೆ ತಲುಪಲು ನಾಲ್ಕು ಕಿಲೋಮೀಟರ್ ಆದರೂ ಬೇಕು’’
‘‘ಹಾಗಾದರೆ ಒಳ್ಳೆಯದೇ ಆಯಿತ ಲ್ಲವೆ? ನೀವೇಕೆ ತಡೆಯುತ್ತಿದ್ದಿರಿ?’’
‘‘ಯಾಕೆಂದರೆ ನನ್ನ ಮಗ ಬಾಡಿಗೆಗೆ ತನ್ನ ಗಾಡಿಯನ್ನು ಓಡಿಸುತ್ತಿದ್ದಾನೆ. ಕಾಲ್ನಡಿಗೆಯಲ್ಲಿ ನೀವು ನಗರ ತಲುಪಿದರೆ ಅವನಿಗೆ ಬಾಡಿಗೆ ಸಿಗುವುದು ಹೇಗೆ?’’.