ಮರುಕ
Update: 2018-01-28 18:49 GMT
ಬದುಕಿನ ಕೊನೆಯ ದಿನಗಳಲ್ಲಿ ಅಜ್ಜಿ ತನ್ನ ಮೊಮ್ಮಗನ ಬಳಿ ಸತ್ಯ ಬಿಚ್ಚಿಟ್ಟಳು
‘‘ಮಗಾ, ನಿನ್ನಜ್ಜನದು ಸಹಜ ಸಾವಾಗಿರಲಿಲ್ಲ. ಪಾಯಸದಲ್ಲಿ ನಾನೇ ವಿಷ ಹಾಕಿ ಅವರಿಗೆ ಕೊಟ್ಟೆ’’
ಮೊಮ್ಮಗ ಆಘಾತದಿಂದ ಕೇಳಿದ ‘‘ಸ್ವತಃ ಗಂಡನಿಗೆ ವಿಷ ಹಾಕುವಾಗ ನಿನ್ನ ಮನಸ್ಸು ಮರುಗಲಿಲ್ಲವೇ?’’
ಅಜ್ಜಿ ನಿಟ್ಟುಸಿರುಟ್ಟು ಹೇಳಿದಳು ‘‘ಪಾಯಸ ಎಲ್ಲ ಕುಡಿದು ‘ತುಂಬಾ ಚೆನ್ನಾಗಿದೆ. ಇನ್ನೊಂದು ಲೋಟ ಕೊಡು’ ಎಂದರಲ್ಲ, ಆಗ ಮಾತ್ರ ನನಗೆ ಅಯ್ಯೋ ಪಾಪ ಅನ್ನಿಸಿತು. ಕೊಟ್ಟು ಬಿಟ್ಟೆ’’