ಡಬ್ಲ್ಯುಜೆಸಿ ಫೈನಲ್ಸ್ ಮಾನವ್ ಥಕ್ಕರ್‌ಗೆ ಬೆಳ್ಳಿ

Update: 2018-02-05 18:45 GMT

ಹೊಸದಿಲ್ಲಿ, ಫೆ.5: ಭಾರತದ ಟೇಬಲ್ ಟೆನಿಸ್ ಪಟು ಮಾನವ್ ಥಕ್ಕರ್ ಲಕ್ಸಂಬರ್ಗ್‌ನಲ್ಲಿ ನಡೆದ 2018ರ ಐಟಿಟಿಎಫ್ ವರ್ಲ್ಡ್‌ಜೂನಿಯರ್ ಟೂರ್ನಿಯ ಫೈನಲ್‌ನಲ್ಲಿ ಎಡವುವ ಮೂಲಕ ಬೆಳ್ಳಿಗೆ ತೃಪ್ತಿಪಟ್ಟುಕೊಂಡಿದ್ದಾರೆ.

ಮೂರನೇ ಶ್ರೇಯಾಂಕದ ಮಾನವ್ ರವಿವಾರ ಸಂಜೆ ನಡೆದ ಫೈನಲ್ ಹಣಾಹಣಿಯಲ್ಲಿ ಅಗ್ರ ಶ್ರೇಯಾಂಕದ ಅಮೆರಿಕದ ಆಟಗಾರ ಕನಕ್ ಝಾ ವಿರುದ್ಧ 3-4(11-9, 3-11, 11-9, 6-11,3-11, 11-9, 6-11)ಅಂತರದಿಂದ ಸೋತಿದ್ದಾರೆ. ಮಾನವ್ ಸೆಮಿ ಫೈನಲ್‌ನಲ್ಲಿ ಈಜಿಪ್ಟ್‌ನ ಯೂಸುಫ್ ಅಬ್ದುಲ್-ಅಝೀಝ್ ವಿರುದ್ಧ 11-8, 11-8, 11-8 ನೇರ ಗೇಮ್‌ಗಳಿಂದ ಜಯ ಸಾಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News