ಸಂಬಂಧ
Update: 2018-03-02 18:37 GMT
ತುಂಬಾ ಅಪರೂಪಕ್ಕೆ ಸಿಕ್ಕಿದ ಆತನನ್ನು ಗುರುತು ಹಿಡಿದು ಕರೆದರು ‘‘ಯಾಕೆ? ಈಗ ನೀನು ಮೊದಲಿನಂತೆ ಸಿಗುವುದೇ ಇಲ್ಲ’’
‘‘ಸಾರ್...ನನ್ನ ಮೊಬೈಲ್ ಕಳೆದು ಹೋಯಿತು. ನಿಮ್ಮ ನಂಬರ್ ಕೂಡ ಅದರ ಜೊತೆಗೇ ಕಳೆದು ಹೋಯಿತು...’’
‘‘ಮೊಬೈಲ್ ಕಂಡು ಹುಡುಕುವ ಮೊದಲೇ ಮನುಷ್ಯ ಸಂಬಂಧಗಳು ಅಸ್ತಿತ್ವದಲ್ಲಿದ್ದವು. ಮರೆಯಬೇಡ’’ ಅವರು ಆತನ ತಲೆ ಸವರಿ ಮುಂದೆ ಹೋದರು.