ಸ್ಪರ್ಧೆ

Update: 2018-03-20 18:48 GMT
Editor : -ಮಗು

ಅದೊಂದು ಊರು. ಆ ಊರಲ್ಲಿ ಗಂಡ-ಹೆಂಡತಿ. ಅವರಿಬ್ಬರು ತುಂಬಾ ಪ್ರೀತಿಸುತ್ತಿದ್ದರು. ಒಮ್ಮೆ ಅದೇನು ಕಾರಣವೋ ಇಬ್ಬರ ನಡುವೆ ಭೀಕರ ಜಗಳವಾಯಿತು. ಗಂಡ ಹೆಂಡತಿ ಬೇರೆ ಬೇರೆಯಾದರು. ಆ ಊರಿಗೆ ಚುನಾವಣೆ ಬಂತು. ಗಂಡ ಚುನಾವಣೆಗೆ ನಿಂತ. ಇದು ಕೇಳಿದ ಹೆಂಡತಿ ಅವನ ವಿರುದ್ಧ ಸ್ಪರ್ಧೆಗೆ ನಿಂತಳು. ಚುನಾವಣೆಗೆ ಕಳೆ ಬಂತು. ಹೀಗಿರುವಾಗ ಒಂದು ದಿನ ಗಂಡನಿಗೆ ಅದೇನಾಯಿತೋ, ಹೆಂಡತಿಯ ಪ್ರೀತಿಯ ಹಳೆಯ ನೆನಪುಗಳು ಉಕ್ಕಿ ಬಂತು. ಆತ ಇದ್ದಕ್ಕಿದ್ದಂತೆಯೇ, ನನ್ನ ಹೆಂಡತಿಗೆ ಓಟು ಕೊಡಿ ಎಂದು ಕೇಳಲು ಶುರು ಹಚ್ಚಿದ. ಇದು ಹೆಂಡತಿಗೆ ಗೊತ್ತಾಗಿ, ಆಕೆಗೂ ಗಂಡನ ಮೇಲೆ ಪ್ರೀತಿ ಉಕ್ಕಿತು. ಇದೀಗ ಆಕೆ ಗಂಡನಿಗೆ ಓಟು ಕೊಡಿ ಎಂದು ಕೇಳತೊಡಗಿದಳು. ಇದೀಗ ಈ ಸ್ಪರ್ಧೆಯಲ್ಲಿ ಯಾರು ಗೆಲ್ಲುತ್ತಾರೆ ಎನ್ನುವುದು ಊರಿಡೀ ಚರ್ಚೆ.

Writer - -ಮಗು

contributor

Editor - -ಮಗು

contributor

Similar News

ಬೆಲೆ
ದಾಂಪತ್ಯ
ಶಾಂತಿ
ಬೆಳಕು
ಮಾನ್ಯತೆ!
ವ್ಯಾಪಾರ
ಆಕ್ಸಿಜನ್
ಝಲಕ್
ಸ್ವರ್ಗ
ಪ್ರಾರ್ಥನೆ
ಗೊಂದಲ!
ಆ ಚಿಂತಕ!