ವ್ಯಾಪಾರ
Update: 2018-05-05 18:43 GMT
ಆತ ಗುಜರಿ ಆಯುವವನು.
ಮನೆಯೊಂದರ ಯಜಮಾನ ಆತನನ್ನು ಕೂಗಿ ಮನೆಯಲ್ಲಿರುವ ಒಂದಿಷ್ಟು ಹಳೆ ಸಾಮಾನುಗಳನ್ನು ತೂಗಿ ಕೊಟ್ಟ. ಕಾಗದ ಪತ್ರಗಳನ್ನೆಲ್ಲ ತೂಗಿ ಅದರ ಬೆಲೆಯನ್ನು ಗುಜರಿ ಆಯುವವನು ಕೊಟ್ಟು ಬಿಟ್ಟ.
ಗುಜರಿ ಹೊತ್ತುಕೊಂಡು ಅರ್ಧ ದಾರಿ ಸಾಗಬೇಕು, ಅಷ್ಟರಲ್ಲಿ ಯಜವ ಾನ ಓಡೋಡಿ ಬಂದ.
‘‘ಹೇ....ನಾನು ತೂಗಿ ಕೊಟ್ಟ ಕಾಗದಗಳಲ್ಲಿ ಮಹತ್ವದ ದಾಖಲೆಯೊಂದು ಅದರೊಂದಿಗೆ ಸೇರಿ ಹೋಗಿದೆ...ಸ್ವಲ್ಪ ನೋಡು....’’
ಗುಜರಿ ಆಯುವವ ಹುಡುಕಿದ. ನೋಡಿದರೆ ಯಜಮಾನನ ಮನೆಯ ಜಮೀನಿನ ದಾಖಲೆ.
ಗುಜರಿ ಆಯುವವ ಹೇಳಿದ ‘‘ನೀನಿದನ್ನು ನನಗೆ ತೂಗಿ ಕೊಡುವಾಗ ಕೆ.ಜಿಗೆ 2 ರೂಪಾಯಿಯ ಹಾಗೆ ಕೊಟ್ಟೆ. ಇದೀಗ ನನ್ನ ಸೊತ್ತು. ಹೇಳು, ಈ ಕಾಗದ ಪತ್ರಕ್ಕೆ ನೀನು ಕೆಜಿಗೆ ಎಷ್ಟು ಕೊಡುತ್ತೀಯಾ?’’