ಲೋಪಕ್ಕೆ ಯಾರು ಹೊಣೆ..?

Update: 2018-06-08 18:38 GMT

ಮಾನ್ಯರೇ,

ಕೇಂದ್ರ ಸರಕಾರ, ‘ಆಯುಷ್ಮಾನ್ ಭಾರತ್’ ಎಂಬ ಆರೋಗ್ಯ ಯೋಜನೆಯನ್ನು ಜಾರಿಗೆ ತಂದಿದೆ. ಆದರೆ ದೇಶದಲ್ಲಿ ಈ ಯೋಜನೆಯ ಸಂಪೂರ್ಣ ಲಾಭ ಅಶಕ್ತರಿಗೆ, ಬಡವರು, ದುರ್ಬಲರಿಗೆ ಇನ್ನೂ ಸಿಕ್ಕಿಲ್ಲ. ಇದಕ್ಕೆ ವ್ಯವಸ್ಥೆಯ ದೋಷವೇ ಕಾರಣ. ಅದರಲ್ಲೂ ಉತ್ತರ ಪ್ರದೇಶದಲ್ಲಿ ಈ ಯೋಜನೆಯನ್ನು ಶ್ರೀಮಂತ ವ್ಯಕ್ತಿಗಳು ಬಳಸುತ್ತಿರುವ ವಿಚಾರ ಬಯಲಾಗಿದೆ. ಅಂದರೆ ಉಳ್ಳವರಿಗೆ ಮತ್ತಷ್ಟು ಲಾಭ, ಇಲ್ಲದವರಿಗೆ ಏನೂ ಇಲ್ಲ. ಇದಕ್ಕೆ ಯಾರು ಹೊಣೆ..? ಇನ್ನು ಈ ವರ್ಷದಲ್ಲಿ ಸುಮಾರು 50 ಕೋಟಿ ಜನರಿಗೆ ಈ ಯೋಜನೆ ವಿಸ್ತರಿಸುವ ಮಾತುಕತೆ ನಡೆಯುತ್ತಿದ್ದು ಇದು ಸಾಧ್ಯವೇ ಎಂಬ ಪ್ರಶ್ನೆ ಉದ್ಭವಿಸಿದೆ. ಯಾಕೆಂದರೆ ಈವರೆಗೆ ಅರ್ಹರಿಗೆ ಈ ಆರೋಗ್ಯ ಯೋಜನೆಯ ಲಾಭ ಸಂಪೂರ್ಣವಾಗಿ ಸಿಕ್ಕಿಲ್ಲ ಅಂದಮೇಲೆ ಇನ್ನುಳಿದ ದಿನಗಳಲ್ಲಿ ಈ ಯೋಜನೆಯನ್ನು ದೇಶದ ಬಡವರಿಗೆ, ಅಶಕ್ತರಿಗೆ ನೀಡಲು ಸಾಧ್ಯವೇ..? 

Writer - -ಶಂಶೀರ್ ಬುಡೋಳಿ, ಬಂಟ್ವಾಳ

contributor

Editor - -ಶಂಶೀರ್ ಬುಡೋಳಿ, ಬಂಟ್ವಾಳ

contributor

Similar News