ಈ ಕೇಸ್ ಅಳವಡಿಸಿದರೆ ಮೊಬೈಲ್ ಫೋನ್ ಕೆಳಗೆ ಬಿದ್ದರೂ ಏನೂ ಆಗದು!

Update: 2018-07-03 18:39 GMT

ಈಗ ಮೊಬೈಲ್ ಫೋನ್‌ನ್ನು ಹೊಂದಿರದ ಜನರೇ ಇರಲಿಕ್ಕಿಲ್ಲ. ಎಷ್ಟೇ ಬೆಲೆ ಬಾಳುವ ಮೊಬೈಲ್ ಫೋನ್ ಆದರೂ ಕೆಳಗೆ ಬಿದ್ದರೆ ಹಾನಿಯಾಗದೆ ಇರದು. ಕವರ್, ಕೇಸ್‌ಗಳು ಮೊಬೈಲ್ ಫೋನ್‌ಗಳಿಗೆ ಸ್ಪಲ್ಪ ಪ್ರಮಾಣದ ರಕ್ಷಣೆ ನೀಡಿದರೂ, ಪೂರ್ಣ ರಕ್ಷಣೆ ನೀಡಲಾರದು. ಇದಕ್ಕಾಗಿ ಮೊಬೈಲ್ ಫೋನ್ ಕೆಳಗೆ ಬೀಳುವಾಗ ನಾಲ್ಕೂ ದಿಕ್ಕಿನಿಂದಲೂ ಸ್ಪ್ರಿಂಗ್ ಬಿಚ್ಚಿಕೊಂಡು ಹರಡಿಕೊಳ್ಳುವ ಮೊಬೈಲ್ ಏರ್‌ಬ್ಯಾಗ್ ಕೇಸ್ ಒಂದನ್ನು ಜರ್ಮನ್ ಇಂಜಿನಿಯರ್ ವಿದ್ಯಾರ್ಥಿಯೊಬ್ಬ ಸಂಶೋಧಿಸಿದ್ದಾನೆ.
ಮೊಬೈಲ್ ಫೋನ್‌ಗೆ ನೀರು ತಗಲದಂತೆ, ಬಿರುಕು ಉಂಟಾಗದಂತೆ, ಗೀರಾಗದಂತೆ ರಕ್ಷಿಸಲು ಮಾರುಕಟ್ಟೆಯಲ್ಲಿ ಹಲವು ರೀತಿಯ ಕೇಸ್‌ಗಳು ಲಭವಿದೆ. ಆದರೆ, ಈ ಕೇಸ್‌ಗಳು ಅಷ್ಟು ಸುರಕ್ಷಿತವಲ್ಲ. ಆದರೆ ಎ.ಡಿ. ಎಂದು ಕರೆಯಲಾಗುವ ಕೇಸ್ ಮೊಬೈಲ್ ಫೋನ್ ಕೆಳಗೆ ಬೀಳುವಾಗ ಹರಡಿಕೊಳ್ಳುತ್ತದೆ ಹಾಗೂ ಮೊಬೈಲ್‌ೆಗೆ ಹಾನಿ ಾಗುವುದನ್ನು ತಡೆಯುತ್ತದೆ.
25ರ ಹರೆಯದ ಫಿಲಿಪ್ ಫ್ರೆಂಝೆಲ್ ಜರ್ಮನಿಯ ಅಲೆನ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ. ಒಮ್ಮೆ ಈತನ ಜಾಕೆಟ್‌ನಿಂದ ಮೊಬೈಲ್ ಫೋನ್ ಕೆಳಗೆ ಬಿದ್ದು ಒಡೆದು ಹೋಗಿತ್ತು. ಅನಂತರ ಫಿಲಿಪ್ ಮೊಬೈಲ್ ಕೆಳಗೆ ಬಿದ್ದರೂ ಸುರಕ್ಷಿತವಾಗಿ ಇರುವಂತೆ ಕೇಸ್ ಒಂದನ್ನು ಸಂಶೋಧಿಸಲು ಮುಂದಾದ. ಈಗಿರುವ ದೊಡ್ಡ ಹಾಗೂ ಅನುಕೂಲಕರವಲ್ಲದ ಬದಲಿಗೆ ಸಣ್ಣ ಹಾಗೂ ಅತ್ಯಾಧುನಿಕ ಕೇಸ್ ಸಂಶೋಧಿಸುವ ನಿರ್ಧಾರ ಕೈಗೊಂಡ. ಯಶಸ್ವಿಯೂ ಆದ. ಈ ಸಾಧನಕ್ಕೆ ಪೇಟೆಂ್ ಪಡೆಯಲು ಫಿಲಿಪ್ ಅರ್ಜಿ ಸಲ್ಲಿಸಿದ್ದಾನೆ.
ಮೊಬೈಲ್ ಫೋನ್ ಕೆಳಗೆ ಬೀಳುತ್ತಿರುವಂತೆ ಕೇಸ್‌ನಲ್ಲಿ ಅಳವಡಿಸಿರುವ ಸೆನ್ಸಾರ್‌ಗೆ ಅರಿವಾಗುತ್ತದೆ. ಕೂಡಲೇ ಕೇಸ್‌ನ ನಾಲ್ಕು ಸ್ಪ್ರಿಂಗ್‌ಗಳು ಬಿಚ್ಚಿಕೊಳ್ಳುತ್ತದೆ. ಇದರಿಂದ ಮೊಬೈಲ್ ಕೆಳಗೆ ಬಿದ್ದಾಗ ಮೇಲೆ ನೆಗೆದು ಮತ್ತೆ ನಿಷ್ಕ್ರಿಯವಾಗುತ್ತದೆ. ಮೊಬೈಲ್ ಫೋನ್‌ಗೆ ಯಾವುದೇ ಹಾನಿ ಆಗುವುದಿಲ್ಲ.
ಮೊಬೈಲ್ ಏರ್ ಬ್ಯಾಗ್ ಅಥವಾ ಎಡಿ ಕೇಸ್ ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಈ ಸಂಶೋಧನೆಗಾಗಿ ಜರ್ಮನ್ ಸೊಸೈಟಿ ಆಫ್ ಮೆಕಟ್ರೋನಿಕ್ಸ್ ಫಿಲಿಪ್‌ಗೆ ಪ್ರಶಸ್ತಿ ನೀಡಿ ಗೌರವಿಸಿದೆ. ಈ ಕೇಸ್ ಬಗೆಗಿನ ವೀಡಿಯೊವನ್ನು ಸಾರ್ವಜನಿಕ ಪ್ರಸಾರ ಇಲಾಖೆ ಪೋಸ್ಟ್ ಮಾಡಿದೆ. ಈ ವೀಡಿಯೊದ ಪ್ರಕಾರ ಮೊಬೈಲ್ ಫೋನ್ ಕೆಳಗೆ ಬೀಳುವಾಗ ರಕ್ಷಿಸುವ ಈ ಸಾಧನ ಕಡಿಮೆ ಭಾರ ಹೊಂದಿದೆ. ಫಿಲಿಪ್ ಕ್ರೌಡ್ ಫಂಡಿಂಗ್ ಮೂಲಕ ಈ ಸಾಧನವನ್ನು ಮಾರುಕಟ್ಟೆಗೆ ಬಿುಗಡೆ ಮಾಡಲು ಯೋಚಿಸುತ್ತಿದ್ದಾನೆ.

 

Writer - *ವಿಸ್ಮಯ

contributor

Editor - *ವಿಸ್ಮಯ

contributor

Similar News