ಬಸವನ ಹುಳಗಳ ಓಟದ ಸ್ಪರ್ಧೆ

Update: 2018-07-24 18:33 GMT

 ಓಟದ ಪಂದ್ಯ ಆರಂಭಕಾರರು ‘‘ರೆಡಿ, ಸ್ಟೆಡಿ, ಸ್ಲೋ’’ ಎಂದು ಕೂಗುತ್ತಾರೆ. ಕೂಡಲೇ ಜನರ ಹರ್ಷೋದ್ಗಾರ ಕೇಳಿ ಬರುತ್ತದೆ. ನೀವಂದುಕೊಂಡಂತೆ ಇದು ಜನರ ಓಟದ ಪಂದ್ಯವಲ್ಲ. ಬದಲಾಗಿ ಬಸವನ ಹುಳಗಳ ಓಟದ ಸ್ಪರ್ಧೆ. ಜಾಗತಿಕ ಬಸನ ಹುಳಗಳ ಓಟದ ಚಾಂಪಿಯನ್‌ಶಿಪ್.

  ಪೂರ್ವ ಇಂಗ್ಲೆಂಡ್‌ನ ನಾರ್‌ಫೋಲ್ಕ್‌ನಲ್ಲಿ ಆಯೋಜಿಸಲಾಗಿದ್ದ ಬೇಸಗೆ ಉತ್ಸವದಲ್ಲಿ ನಡೆದ ಓಟದ ಸ್ಪರ್ಧೆಯಲ್ಲಿ 150ಕ್ಕೂ ಅಧಿಕ ಬಸವನ ಹುಳಗಳು ಭಾಗವಹಿಸಿದ್ದವು. ಪ್ರಶಸ್ತಿ ಪಡೆದ ಬಸವನ ಹುಳಗಳಿಗೆ ಲೆಟ್ಯೂಸ್ ಎಲೆಗಳನ್ನು ತುಂಬಿದ್ದ ಬೆಳ್ಳಿಯ ಡಬ್ಬವನ್ನು ನೀಡಲಾಯಿತು.
ವಿಶೇಷವಾದ ಆರ್ದ್ರ ಬಟ್ಟೆಯಲ್ಲಿ ಗುರುತಿಸಲಾದ ಮೂರು ಕೇಂದ್ರೀಕೃತ ವೃತ್ತದಲ್ಲಿ ಬಸವನಹುಳಗಳನ್ನು ಇರಿಸಲಾಗುತ್ತದೆ ಹಾಗೂ ಬಸವನ ಹುಳಗಳು ಹೊರಗಿನ ವೃತ್ತದ ವರೆಗೆ ಅಂದರೆ, 13 ಇಂಚುಗಳಷ್ಟು ಓಡಬೇಕಾಗುತ್ತದೆ.
ನಾವು ಈ ಪಂದ್ಯವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ಬಸವನಹುಳ ಓಟಾರ ಜೋನ್ ಮಕ್‌ಕ್ಲೀನ್ ತಿಳಿಸಿದ್ದಾರೆ.
ನಾವು ಬಸವನ ಹುಳಗಳಿಗೆ ಇಳಿಜಾರು ಪ್ರದೇಶದಲ್ಲಿ ತರಬೇತಿ ನೀಡುತ್ತೇವೆ. ಅದಕ್ಕೆ ಪಥ್ಯಾಹಾರ ನೀಡುತ್ತೇವೆ. ಉದ್ದೀಪನ ಔಷಧ ಚುಚ್ಚಿರುವ ಬಗ್ಗೆ ಕೆಲವೊಮ್ಮೆ ದೂರು ಬರುತ್ತದೆ. ಈ ಸ್ಪರ್ಧೆಯನ್ನು ನಾವು ಇತರ ಸ್ಪರ್ಧೆಗಳಂತೆ ಪರಿಗಣಿಸುತ್ತೇವೆ ಎಂದು ಅವರು ಹೇಳಿದ್ದಾರೆ.
ಈ ಸ್ಪರ್ಧೆಯನ್ನು 1960ರಿಂದ ಆಯೋಜಿಸಲಾಗುತ್ತಿದೆ. ಪ್ರತಿ ಸ್ಪರ್ಧೆ ಹಲವು ನಿಮಿಷಗಳಲ್ಲಿ ಮುಗಿಯುತ್ತದೆ.

 

Writer - *ವಿಸ್ಮಯ

contributor

Editor - *ವಿಸ್ಮಯ

contributor

Similar News