ಪ್ರವಾಹದ ನೀರಿಗೆ ಎಸೆದು 9 ವರ್ಷದ ಬಾಲಕನ ಹತ್ಯೆ: ವ್ಯಕ್ತಿಯ ಬಂಧನ

Update: 2018-08-26 16:56 GMT

ಮಲಪ್ಪುರಂ, ಆ. 26: ಎರಡು ವಾರಗಳ ಹಿಂದೆ ಸಹೋದರನ 9 ವರ್ಷದ ಮಗನನ್ನು ಅಪಹರಿಸಿ ಕಡಲುಂಡಿ ನದಿಯ ನೆರೆ ನೀರಲ್ಲಿ ಮುಳುಗಿಸಿ ಹತ್ಯೆಗೈದ ಆರೋಪದಲ್ಲಿ ಮಲಪ್ಪುರದ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.

ತನ್ನ ಸಹೋದರನಿಂದ ಹಣ ಸುಲಿಗೆ ಮಾಡುವ ಉದ್ದೇಶದಿಂದ ಆರೋಪಿ ಮುಹಮ್ಮದ್ ಸಹೋದರನ ಪುತ್ರ 4ನೇ ತರಗತಿ ವಿದ್ಯಾರ್ಥಿ ಶಹೀನ್‌ನನ್ನು ಅಪಹರಿಸಿದ್ದ. ಆಗಸ್ಟ್ 13ರಂದು ಮೇಲಟ್ಟೂರಿನಂದ ಶಹೀನ್ ಕಾಣೆಯಾಗಿದ್ದ. ಈ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ ಸುದ್ದಿ ಶೇರ್ ಆಗಿತ್ತು. ಬಂಧಿತ ಆರೋಪಿ ಮುಹಮ್ಮದ್ ತಾನು ಬಾಲಕನನ್ನು ನದಿಗೆ ಎಸೆದಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News