ಪ್ಲಾಸ್ಟಿಕ್ ಬಾಟಲಿ ನಿಷೇಧ ಅಗತ್ಯ

Update: 2018-08-31 18:44 GMT

ಮಾನ್ಯರೇ,

ಮನುಷ್ಯರು ಹಾಗೂ ಪ್ರಾಣಿಗಳು ಬದುಕುವುದಕ್ಕೆ ಪರಿಸರ ಅಗತ್ಯ. ಹೀಗಾಗಿ ಸದಾ ಪ್ರಕೃತಿಯನ್ನು ಪೋಷಿಸುವುದು, ಸಂರಕ್ಷಿಸುವುದು, ಸ್ವಚ್ಛವಾಗಿಡುವುದು ಕೂಡಾ ಅಗತ್ಯ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಪ್ಲಾಸ್ಟಿಕ್ ಬಾಟಲಿಗಳನ್ನು ನಿಷೇಧ ಮಾಡಲು ಚಿಂತನೆ ನಡೆಸಿರುವುದು ಸ್ವಾಗತಾರ್ಹ. ಆದರೆ ಇದು ಕೇವಲ ಸರಕಾರಿ ಕಚೇರಿಗಳಲ್ಲಿ ಹಾಗೂ ಸರಕಾರಿ ಸಭೆ-ಸಮಾರಂಭಗಳಿಗೆ ಮಾತ್ರ ಸೀಮಿತವಾಗದಿರಲಿ. ಇದು ಸಾರ್ವಜನಿಕವಾಗಿಯೂ ಕಾರ್ಯರೂಪಕ್ಕೆ ಬರಲಿ. ಯಾಕೆಂದರೆ ಈಗಾಗಲೇ ಪ್ಲಾಸ್ಟಿಕ್ ಬಾಟಲಿಗಳ ಅತಿಯಾದ ಬಳಕೆಯಿಂದ ನೂರಾರು ಸಮಸ್ಯೆಗಳು ಸೃಷ್ಟಿಯಾಗಿವೆ. ಜೊತೆಗೆ ಅನೇಕ ರೋಗಗಳ ಸೃಷ್ಟಿಗೆ ಕೂಡಾ ಕಾರಣವಾಗಿದೆ. ‘ಕುಡಿದು ಎಸೆಯುವ’ ನಿರ್ಲಕ್ಷ್ಯದ ಧೋರಣೆಯಿಂದ ಪರಿಸರ ಈಗಾಗಲೇ ಕಲುಷಿತಗೊಂಡಿದೆ. ಅಲ್ಲದೇ ಪ್ಲಾಸ್ಟಿಕ್ ಬಾಟಲಿಗಳ ಯಥೇಚ್ಛವಾದ ಬಳಕೆಯಿಂದ ಭೂಮಿಯಲ್ಲಿರುವ ಇತರ ಜೀವಿಗಳು ತೊಂದರೆ ಅನುಭವಿಸುತ್ತಿವೆ. ಹಾಗಾಗಿ ಈ ಸರಕಾರದ ಅವಧಿಯಲ್ಲಿ ಪ್ಲಾಸ್ಟಿಕ್ ಬಾಟಲಿ ಬಳಕೆ ನಿಷೇಧಗೊಂಡರೆ ಉತ್ತಮ ಮಾತ್ರವಲ್ಲ, ಜನಪರ ನಿರ್ಧಾರವಾಗಲಿದೆ.

Writer - -ಶಂಶೀರ್ ಬುಡೋಳಿ, ಬಂಟ್ವಾಳ

contributor

Editor - -ಶಂಶೀರ್ ಬುಡೋಳಿ, ಬಂಟ್ವಾಳ

contributor

Similar News