ಬುಲಂದ್‌ ಶಹರ್ ಹಿಂಸಾಚಾರ: ಮೂವರ ಬಂಧನ

Update: 2018-12-04 08:47 GMT

ಬುಲಂದ್‌ಶಹರ್(ಉ.ಪ್ರ.), ಡಿ.4: ಗೋವುಗಳ ಕಳೇಬರಗಳು ಪತ್ತೆಯಾದ ವದಂತಿಯ ಹಿನ್ನೆಲೆಯಲ್ಲಿ ಪಶ್ಚಿಮ ಉತ್ತರಪ್ರದೇಶದ ಬುಲಂದ್‌ಶಹರ್‌ನ ಗ್ರಾಮವೊಂದರಲ್ಲಿ ಸೋಮವಾರ ಸಂಭವಿಸಿದ ಹಿಂಸಾಚಾರ ಘಟನೆಗೆ ಸಂಬಂಧಿಸಿ ಪೊಲೀಸರು ಮಂಗಳವಾರ ಮೂವರನ್ನು ಬಂಧಿಸಿದ್ದಾರೆ.

ಸೋಮವಾರ ಸಂಭವಿಸಿದ ಹಿಂಸಾಚಾರದಲ್ಲಿ ಉದ್ರಿಕ್ತ ಗುಂಪು ಕಲ್ಲು ತೂರಾಟ ನಡೆಸಿದ ಪರಿಣಾಮ ಇನ್‌ಸ್ಪೆಕ್ಟರ್ ಸುಬೋಧ್ ಕುಮಾರ್ ಸಿಂಗ್ ಸಹಿತ ಇಬ್ಬರು ಮೃತಪಟ್ಟಿದ್ದಾರೆ. ಇದೀಗ ಹಿಂಸಾಚಾರ ಘಟನೆಯನ್ನು ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ.

ಸಿಯಾನಾ ಪೊಲೀಸರು ಮಾಹಾವ್ ಗ್ರಾಮದ ನಿವಾಸಿಗಳ ವಿರುದ್ಧ ಹತ್ಯೆ ಹಾಗೂ ಗಲಭೆ ಪ್ರಕರಣವನ್ನು ದಾಖಲಿಸಿದ್ದಾರೆ. ಬುಲಂದ್‌ಶಹರ್‌ನ ಬಜರಂಗದಳದ ಸಂಚಾಲಕ ಯೋಗೇಶ್ ರಾಜ್ ಸಹಿತ 28 ಜನರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಯೋಗೇಶ್ ರಾಜ್ ಇತ್ತೀಚೆಗೆ ತನ್ನ ಗ್ರಾಮ ಸಮೀಪ ಗೋ ಹತ್ಯೆ ನಡೆಯುತ್ತಿದೆ ಎಂದು ಪೊಲೀಸರಿಗೆ ದೂರು ನೀಡಿದ್ದ.

‘‘ಹಿಂಸಾಚಾರ ಏಕಾಯಿತು ಹಾಗೂ ಪೊಲೀಸ್ ಸಿಬ್ಬಂದಿಗಳು ಇನ್ಸ್‌ಪೆಕ್ಟರ್ ಸುಬೋಧ್ ಕುಮಾರ್ ಒಬ್ಬರನ್ನೇ ಏಕೆ ಸ್ಥಳದಲ್ಲಿ ಬಿಟ್ಟುಹೋಗಿದ್ದಾರೆ ಎಂಬ ಕುರಿತು ತನಿಖೆ ನಡೆಸಲು ವಿಶೇಷ ತನಿಖಾ ತಂಡ(ಸಿಟ್)ರಚಿಸಲಾಗಿದೆ’’ ಎಂದು ಮೀರತ್ ವಲಯದ ಎಡಿಜಿ ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News