ಭಾರತೀಯ ಯುವಕನಿಗೆ ಮಿಸ್ಟರ್ ಸುಪ್ರಾನ್ಯಾಷನಲ್ ಕಿರೀಟ

Update: 2018-12-09 03:57 GMT

ಪೋಲಂಡ್, ಡಿ. 9: ಇಲ್ಲಿನ ಕ್ರಿನಿಕಾದೋರ್ಜ್ ಪಟ್ಟಣದಲ್ಲಿ ನಡೆದ ಮಿಸ್ಟರ್ ಸುಪ್ರಾನ್ಯಾಷನಲ್-2018 ಸೌಂದರ್ಯ ಸ್ಪರ್ಧೆಯಲ್ಲಿ ಭಾರತದ ಪ್ರಥಮೇಶ್ ಮೌಲಿಂಕರ್ ಪ್ರಥಮ ಸ್ಥಾನ ಗಳಿಸಿ ಇತಿಹಾಸ ಸೃಷ್ಟಿಸಿದ್ದಾರೆ.

ಇತರ 39 ಮಂದಿ ಫೈನಲಿಸ್ಟ್‌ಗಳನ್ನು ಸೋಲಿಸಿ ಈ ಪ್ರಶಸ್ತಿ ಜಯಿಸಿದ ಪ್ರಥಮೇಶ್, ಈ ಸಾಧನೆ ಮಾಡಿದ ಮೊಟ್ಟಮೊದಲ ಭಾರತೀಯ ಎನಿಸಿಕೊಂಡಿದ್ದಾರೆ.

ಪ್ರಥಮೇಶ್‌ಗೆ 2017ನೇ ವರ್ಷದ ಮಿಸ್ಟರ್ ಸುಪ್ರಾನ್ಯಾಷನಲ್ ಗ್ಯಾಬ್ರಿಯಲ್ ಕೊರೆಯಾ ಪ್ರಶಸ್ತಿ ನೀಡಿ ಗೌರವಿಸಿದರು. 2018ರ ಮಿಸ್ ಸುಪ್ರಾನ್ಯಾಷನಲ್ ವಲೇರಿಯಾ ವಝಿಕ್ಯುಕ್ ಅವರವಿಂದ ಟ್ರೋಫಿ ಸ್ವೀಕರಿಸಿದರು. ಈ ಸ್ಪರ್ಧೆಯಲ್ಲಿ ಪೋಲಂಡ್‌ನ ಜಾಕುಬ್ ಕುನ್ಸೆರ್ ಪ್ರಥಮ ರನ್ನರ್ ಅಪ್ ಆಗಿ ಹೊರಹೊಮ್ಮಿದರು.

ಬ್ರೆಜಿಲ್‌ನ ಸ್ಯಾಮ್ಯುಯೆಲ್ ಕೋಸ್ಟಾ ದ್ವಿತೀಯ, ಥಾಯ್ಲೆಂಡ್‌ನ ಕೆವಿನ್ ಡ್ಯಾಸಮ್ ಹಾಗೂ ಅದೇ ದೇಶದ ಎನ್ನಿಯೊ ಫ್ಲೆಫಿನ್ ಕ್ರಮವಾಗಿ ಮೂರು ಹಾಗೂ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News