ಡಿ. 25ರಂದು ದೇಶದ ಅತೀ ಉದ್ದದ ರೈಲು-ರಸ್ತೆ ಸೇತುವೆ ಉದ್ಘಾಟನೆ

Update: 2018-12-23 14:18 GMT

ಬೋಗಿಬೀಲ್ (ಅಸ್ಸಾಂ), ಡಿ. 23: ಬೋಗಿಬಿಲ್ ಸೇತುವೆ ಮೂಲಕ ಹಾದು ಹೋಗುವ ಮೊದಲ ಪ್ಯಾಸೆಂಜರ್ ರೈಲಿಗೆ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ನಿಶಾನೆ ತೋರಿಸುವ ಮೂಲಕ ದೇಶದ ಅತಿ ಉದ್ದದ ರೈಲು ಹಾಗೂ ರಸ್ತೆ ಸೇತುವೆ ಉದ್ಘಾಟಿಸಲಿದ್ದಾರೆ. ತೀನ್‌ಸುಕಿಯಾ-ನಹರ್ಲಾ ಗಾಂವ್ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲು ವಾರದಲ್ಲಿ ಐದು ದಿನಗಳು ಸಂಚರಿಸಲಿದೆ.

4.9 ಕಿ.ಮೀ. ಉದ್ದದ ಸೇತುವೆಯಿಂದ ಅಸ್ಸಾಂನ ತೀನ್‌ಸುಕಿಯಾ ಹಾಗೂ ಅರುಣಾಚಲ ಪ್ರದೇಶದ ನಹರ್ಲಗಾಂವ್ ನಡುವಿನ ರೈಲು ಸಂಚಾರ 10ಕ್ಕಿಂತಲೂ ಅಧಿಕ ಗಂಟೆಗಳು ಕಡಿತವಾಗಿವೆ. ‘‘ಪ್ರಸ್ತುತ ಸಂಚಾರಕ್ಕೆ 15ರಿಂದ 20 ಗಂಟೆಗಳು ತೆಗೆದುಕೊಳ್ಳುತ್ತದೆ. ಆದರೆ, ಇನ್ನು ಮುಂದೆ ಐದೂವರೆ ಗಂಟೆ ತೆಗೆದುಕೊಳ್ಳಲಿದೆ.’’ ಎಂದು ಈಶಾನ್ಯ ಗಡಿ ರೈಲ್ವೆಯ ವಕ್ತಾರ ನಿರ್ಪೇನ್ ಭಟ್ಟಾಚಾರ್ಯ ತಿಳಿಸಿದ್ದಾರೆ. 14 ಬೋಗಿಗಳ ಚೆಯರ್ ಕಾರ್ ತೀನ್‌ಸುಕಿಯಾದಿಂದ ಅಪರಾಹ್ನ ಸಂಚಾರ ಆರಂಭಿಸಿತು.

ಇದು ನಾಳೆ ಬೆಳಗ್ಗೆ ನಹಾರ್ಲಗಾಂವ್‌ಗೆ ತಲುಪಲಿದೆ ಎಂದು ಅವರು ತಿಳಿಸಿದ್ದಾರೆ. ಬೋಗಿಬೀಲ್ ಸೇತುವೆ ಅಸ್ಸಾಂನ ದಿಬ್ರುಗಡ ಜಿಲ್ಲೆಯಲ್ಲಿರುವ ಬ್ರಹ್ಮಪುತ್ರಾ ನದಿಯ ದಕ್ಷಿಣ ದಂಡೆ ಹಾಗೂ ಗಡಿಯ ಅರುಣಾಚಲ ಪ್ರದೇಶದ ದೇಮಾಜಿ ಜಿಲ್ಲೆಯ ಸಿಲಾಪತ್ತರ್‌ನೊಂದಿಗೆ ಸಂಪರ್ಕ ಹೊಂದಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News