ಕೆಲವೇ ರೈತರು ಬ್ಯಾಂಕ್ ಸಾಲ ಪಡೆಯುತ್ತಿದ್ದು, ಸಾಲಮನ್ನಾ ಹೆಚ್ಚಿನ ರೈತರಿಗೆ ನೆರವಾಗದು

Update: 2019-01-01 16:43 GMT

ಹೊಸದಿಲ್ಲಿ, ಜ.1: ಬ್ಯಾಂಕ್ ನಿಂದ ಕೆಲವೇ ರೈತರು ಸಾಲ ಪಡೆಯುತ್ತಿದ್ದು, ಹೆಚ್ಚಿನ ರೈತರಿಗೆ ಸಾಲಮನ್ನಾ ಘೋಷಣೆಗಳಿಂದ ಲಾಭವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಎಎನ್ ಐ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ ಅವರು, “ಸಾಲಮನ್ನಾ ಘೋಷಣೆಗಳು ರಾಜಕೀಯ ಗಿಮಿಕ್. ಕಡಿಮೆ ಸಂಖ್ಯೆಯ ರೈತರು ಮಾತ್ರ ಬ್ಯಾಂಕ್ ಗಳಿಂದ ಸಾಲ ಪಡೆಯುತ್ತಾರೆ. ಉಳಿದವರು ಸಾಲ ನೀಡುವ ವ್ಯಕ್ತಿಗಳಿಂದ ಹಣ ಪಡೆಯುತ್ತಾರೆ. ಸರಕಾರಗಳ ಈ ಘೋಷಣೆಗಳಿಂದ ಹೆಚ್ಚಿನ ರೈತರಿಗೆ ಲಾಭವಾಗುವುದಿಲ್ಲ” ಎಂದರು.

ಸಾಲಮನ್ನಾಗಳನ್ನು ‘ಲಾಲಿಪಾಪ್’ ಎಂದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ಸುಳ್ಳು ಅಥವಾ ದಾರಿ ತಪ್ಪಿಸುವ ಹೇಳಿಕೆಗಳನ್ನು ನಾನು ‘ಲಾಲಿಪಾಪ್’ ಎಂದೆ. ಎಲ್ಲಾ ರೈತ ಸಾಲಗಳನ್ನು ಮನ್ನಾ ಮಾಡಿದ್ದೇವೆ ಎಂದು ಹೇಳಿದರೂ ಸತ್ಯ ಏನೆಂದರೆ ಅಂತಹದ್ದು ನಡೆದೇ ಇರುವುದಿಲ್ಲ. ಜವಾಬ್ದಾರಿಯುವ ರಾಜಕೀಯ ಪಕ್ಷಗಳು ಜನರ ದಾರಿ ತಪ್ಪಿಸಬಾರದು” ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News