ಕಾರು ಅಪಘಾತ: 97 ವರ್ಷದ ಬ್ರಿಟನ್ ರಾಜಕುಮಾರ ಪಾರು

Update: 2019-01-18 14:36 GMT

ಲಂಡನ್, ಜ. 18: ಪೂರ್ವ ಇಂಗ್ಲೆಂಡ್‌ನ ಸ್ಯಾಂಡ್ರಿಂಗಮ್ ಎಸ್ಟೇಟ್ ಸಮೀಪ ಗುರುವಾರ ನಡೆದ ಕಾರು ಅಪಘಾತದಲ್ಲಿ ಬ್ರಿಟನ್ ರಾಣಿ ಎಲಿಝಬೆತ್‌ರ 97 ವರ್ಷದ ಗಂಡ ರಾಜಕುಮಾರ ಫಿಲಿಪ್ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.

ರಾಜಕುಮಾರನ ಕಾರಿಗೆ ಢಿಕ್ಕಿ ಹೊಡೆದ ಕಾರಿನಲ್ಲಿದ್ದ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ಸಾಗಿಸಲಾಗಿದೆ.

ಸ್ವತಃ ಕಾರು ಚಲಾಯಿಸುತ್ತಿದ್ದ ರಾಜಕುಮಾರ ಫಿಲಿಪ್ ಒಳರಸ್ತೆಯಿಂದ ಮುಖ್ಯ ರಸ್ತೆಗೆ ವಾಹನ ತಿರುಗಿಸುತ್ತಿದ್ದಾಗ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News