ಪ್ರಿಯಾಂಕಾ ಗಾಂಧಿ ಬಗ್ಗೆ ಆಘಾತಕಾರಿ ಆರೋಪ ಮಾಡಿದ ಸುಬ್ರಮಣಿಯನ್‍ ಸ್ವಾಮಿ

Update: 2019-01-27 07:22 GMT

ಹೊಸದಿಲ್ಲಿ, ಜ.27: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರಿಗೆ ಮಾನಸಿಕ ಸಮಸ್ಯೆ (ಬೈಪೋಲಾರ್) ಇದ್ದು, ಆಕೆ ಜನರಿಗೆ ಥಳಿಸುತ್ತಾರೆ ಎಂದು ಹೇಳುವ ಮೂಲಕ ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ವಿವಾದ ಸೃಷ್ಟಿಸಿದ್ದಾರೆ.

ಎಎನ್‍ಐ ಜತೆ ಮಾತನಾಡಿದ ಅವರು, "ಪ್ರಿಯಾಂಕಾಗಾಂಧಿಗೆ ಮಾನಸಿಕಸ್ಥಿತಿ ವ್ಯತ್ಯಯದ ಸಮಸ್ಯೆ ಇದೆ. ಈ ರೋಗದ ಕಾರಣದಿಂದ ಆಕೆ ಸಾರ್ವಜನಿಕ ಜೀವನಕ್ಕೆ ಯೋಗ್ಯವಲ್ಲ. ಆಕೆ ಮಾನಸಿಕ ಸಮತೋಲನ ಕಳೆದುಕೊಳ್ಳುವ ವೇಳೆ ಜನರಿಗೆ ಇದು ತಿಳಿಯಲಿದೆ" ಎಂದು ಹೇಳಿದರು.

ಪ್ರಿಯಾಂಕಾ ಸಕ್ರಿಯ ರಾಜಕಾರಣಕ್ಕೆ ಧುಮುಕಿದ ಬಳಿಕ ಬಿಜೆಪಿ ನಾಯಕರಿಂದ ಟೀಕೆಗೆ ಒಳಗಾಗುತ್ತಿರುವುದು ಇದೇ ಮೊದಲಲ್ಲ. ಬಿಜೆಪಿ ನಾಯಕ ಕೈಲಾಶ್ ವಿಜಯ್‍ವರ್ಗಿಯಾ ಅವರು, ಪ್ರಿಯಾಂಕಾಗಾಂಧಿಯವರನ್ನು ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಿದ ಬಗ್ಗೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ನಲ್ಲಿ ನಾಯಕರ ಕೊರತೆ ಇರುವುದರಿಂದ ಚಾಕಲೇಟ್ ಮುಖಗಳನ್ನು ಚುನಾವಣಾಪೂರ್ವದಲ್ಲಿ ಪರಿಚಯಿಸಲಾಗುತ್ತಿದೆ ಎಂದು ಹೇಳಿಕೆ ನೀಡಿದ್ದರು.

ಬಿಹಾರ ಸಚಿವ ವಿನೋದ್ ನಾರಾಯಣ ಝಾ ಕೂಡಾ, ಸುಂದರ ಮುಖಗಳಿಂದ ಚುನಾವಣೆ ಗೆಲ್ಲಲಾಗದು ಎಂದು ವ್ಯಂಗ್ಯವಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News