ಹಿಂದಿ ಲೇಖಕ, ವಿಮರ್ಶಕ ನಾಮ್ವರ್ ಸಿಂಗ್ ನಿಧನ
Update: 2019-02-20 16:52 GMT
ಹೊಸದಿಲ್ಲಿ,ಫೆ.20: ಲೇಖಕ, ಕವಿ, ವಿಮರ್ಶಕ ಮತ್ತು ಸಮಕಾಲೀನ ಹಿಂದಿ ಸಾಹಿತ್ಯಲೋಕದ ಅತ್ಯಂತ ಮೇರು ವ್ಯಕ್ತಿ ನಾಮ್ವರ್ ಸಿಂಗ್ ಅನಾರೋಗ್ಯದ ಕಾರಣ ನಿಧನರಾದರು ಎಂದು ಅವರ ಕುಟುಂಬಸ್ಥರು ಬುಧವಾರ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.
ಸಿಂಗ್‌ಗೆ 92 ವರ್ಷ ವಯಸ್ಸಾಗಿತ್ತು. ಒಂದು ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸಿಂಗ್ ಅವರು ಮಂಗಳವಾರ ರಾತ್ರಿ ಎಐಐಎಮ್‌ಎಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳಿದರು ಎಂದು ಅವರ ಪುತ್ರಿ ಸಮೀಕ್ಷಾ ತಿಳಿಸಿದ್ದಾರೆ. ತನ್ನ ಚಾಯ್‌ವಾಡ್, ಇತಿಹಾಸ್ ಔರ್ ಆಲೋಚನಾ, ಕಹಾನಿ ನಯೀ ಕಹಾನಿ, ಕವಿತಾ ಕೆ ನಯೆ ಪ್ರತಿಮಾನ್, ದೂಸ್ರಿ ಪರಂಪರಾ ಕಿ ಖೋಜ್ ಮುಂತಾದ ಪುಸ್ತಕಗಳ ಮೂಲಕ ಹಿಂದಿ ಸಾಹಿತ್ಯ ವಿಮರ್ಶೆಗೆ ಹೊಸ ದಿಕ್ಕನ್ನು ನೀಡಿದರು.