ಮುಸ್ಲಿಮ್ ಸಂಸದೆಯ ಮೇಲೆ ಟ್ರಂಪ್ ವಾಗ್ದಾಳಿಗೆ ಟೀಕೆ

Update: 2019-04-14 16:52 GMT

ವಾಶಿಂಗ್ಟನ್, ಎ. 14: ನ್ಯೂಯಾರ್ಕ್ ಮೇಲೆ ನಡೆದ 9/11 ದಾಳಿಯನ್ನು ಡೆಮಾಕ್ರಟಿಕ್ ಪಕ್ಷದ ಮುಸ್ಲಿಮ್ ಸಂಸದೆ ಇಲ್ಹಾನ್ ಉಮರ್ ಗಂಭೀರವಾಗಿ ಪರಿಗಣಿಸಿಲ್ಲ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಆರೋಪವನ್ನು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಟೀಕಿಸಿದ್ದಾರೆ.

ಈ ಬಗ್ಗೆ 2001 ಸೆಪ್ಟಂಬರ್ 11ರಂದು ಅಮೆರಿಕದ ಮೇಲೆ ನಡೆದ ಭಯೋತ್ಪಾದಕ ದಾಳಿಯ ಚಿತ್ರಗಳ ಸಮೇತ ಟ್ರಂಪ್ ಟ್ವೀಟ್ ಮಾಡಿದ್ದರು.

‘‘9/11ರ ನೆನಪು ಪವಿತ್ರ ನೆಲದಂತೆ ಹಾಗೂ ಅದರ ಕುರಿತ ಯಾವುದೇ ಚರ್ಚೆಯನ್ನು ಗೌರವದಿಂದ ಮಾಡಬೇಕು’’ ಎಂದು ಟ್ವಿಟರ್‌ನಲ್ಲಿ ಹಾಕಿದ ಹೇಳಿಕೆಯೊಂದರಲ್ಲಿ ಪೆಲೋಸಿ ಹೇಳಿದ್ದಾರೆ.

‘‘ಟ್ರಂಪ್ ರಾಜಕೀಯ ದಾಳಿಗಾಗಿ 9/11ರ ದುಃಖಭರಿತ ಚಿತ್ರಗಳನ್ನು ಬಳಸಬಾರದು’’ ಎಂದು ಅವರು ಹೇಳಿದ್ದಾರೆ.

ಇತ್ತೀಚೆಗೆ ಇಲ್ಹಾನ್ ಉಮರ್ ಮಾಡಿದ ಭಾಷಣವೊಂದನ್ನು ಉಲ್ಲೇಖಿಸಿ ಟ್ರಂಪ್ ಈ ಟ್ವೀಟ್ ಮಾಡಿದ್ದಾರೆ.

ಇಲ್ಹಾನ್ ಉಮರ್‌ರ ಮಾತುಗಳನ್ನು ಸಂದರ್ಭ ಬಿಟ್ಟು ತೆಗೆಯಲಾಗಿದೆ ಎಂದು ಅಧ್ಯಕ್ಷರ ಟೀಕಾಕಾರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News