ಹುತಾತ್ಮ ಹೇಮಂತ್ ಕರ್ಕರೆ ವಿರುದ್ಧ ಹೇಳಿಕೆ: ಕ್ಷಮೆಯಾಚಿಸಿದ ಪ್ರಜ್ಞಾ ಸಿಂಗ್
Update: 2019-04-19 17:07 GMT
ಹೊಸದಿಲ್ಲಿ, ಎ.19: 26/11 ಹೀರೋ, ಹುತಾತ್ಮ ಅಧಿಕಾರಿ ಹೇಮಂತ್ ಕರ್ಕರೆ ವಿರುದ್ಧ ನೀಡಿದ ಹೇಳಿಕೆಗಾಗಿ ಬಿಜೆಪಿಯ ಭೋಪಾಲ್ ಅಭ್ಯರ್ಥಿ, ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿ ಪ್ರಜ್ಞಾ ಸಿಂಗ್ ಠಾಕೂರ್ ಕ್ಷಮೆ ಯಾಚಿಸಿದ್ದು, ತನ್ನ ಹೇಳಿಕೆಯನ್ನು ಹಿಂದೆಗೆದುಕೊಂಡಿದ್ದಾರೆ.
“ಇದರಿಂದ ದೇಶದ ಶತ್ರುಗಳಿಗೆ ಲಾಭವಾಗಲಿದೆ. ಆದ್ದರಿಂದ ನಾನು ನನ್ನ ಹೇಳಿಕೆಯನ್ನು ಹಿಂಪಡೆಯುತ್ತಿದ್ದು, ಕ್ಷಮೆ ಯಾಚಿಸುತ್ತಿದ್ದೇನೆ. ಅದು ನನ್ನ ವೈಯಕ್ತಿಕ ನೋವು. ಅವರು ಉಗ್ರರ ಗುಂಡುಗಳಿಂದ ಮೃತಪ್ಟರು. ಅವರು ಹುತಾತ್ಮ” ಎಂದು ಪ್ರಜ್ಞಾ ಸಿಂಗ್ ಹೇಳಿದ್ದಾರೆ.