ದ.ಕ. ಜಿಲ್ಲೆಯ 42 ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ

Update: 2019-05-27 11:18 GMT

ಮಂಗಳೂರು, ಮೇ 26: ಪ್ರಸಕ್ತ ಸಾಲಿನ (2019-20) ಶೈಕ್ಷಣಿಕ ವರ್ಷದಿಂದ ದ.ಕ.ಜಿಲ್ಲೆಯ 42 ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮದಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ಹಾಗೂ ಒಂದನೇ ತರಗತಿ ಆರಂಭಿಸಲು ರಾಜ್ಯ ಸರಕಾರ ಅನುಮೋದನೆ ನೀಡಿದೆ. ಅದರೊಂದಿಗೆ ಆಯಾ ಶಿಕ್ಷಣ ವಲಯದ ಅಧಿಕಾರಿಗಳು 42 ಸರಕಾರಿ ಶಾಲೆಗಳ ಮುಖ್ಯಶಿಕ್ಷಕರಿಗೆ ಸುತ್ತೋಲೆ ಕಳುಹಿಸಿ ದಾಖಲಾತಿಗೆ ಅವಕಾಶ ಕಲ್ಪಿಸಿದೆ.

ಮುಂದಿನ ದಿನಗಳಲ್ಲಿ 10ನೇ ತರಗತಿ ತನಕ ಆಂಗ್ಲ ಮಾಧ್ಯಮ ಶಿಕ್ಷಣಕ್ಕೆ ಅವಕಾಶ ನೀಡುವುದಲ್ಲದೆ, ಇತರ ಸರಕಾರಿ ಶಾಲೆಗಳಿಗೂ ಈ ಸೌಲಭ್ಯ ವಿಸ್ತರಿಸಲು ಯೋಜನೆಯೊಂದನ್ನು ಶಿಕ್ಷಣ ಇಲಾಖೆ ಸಿದ್ಧಪಡಿಸಿದೆ. ಈಗಾಗಲೆ ಅನುಮತಿ ಪಡೆದಿರುವ ಶಾಲೆಗಳ ಶಿಕ್ಷಕ ವರ್ಗ ಮತ್ತು ಎಸ್‌ಡಿಎಂಸಿ ಆಡಳಿತ ಮಂಡಳಿಯು ಇಂತಹ ಶಾಲೆಗಳ ಸುತ್ತಮುತ್ತ ಬ್ಯಾನರ್‌ಗಳನ್ನು ಹಾಕಿ ಸರಕಾರಿ ಶಾಲೆಯಲ್ಲೇ ಆಂಗ್ಲಮಾಧ್ಯಮ ನೀಡಲಾಗುವುದು. ಆಸಕ್ತರು ಎಲ್‌ಕೆಜಿ, ಯುಕೆಜಿ, ಒಂದನೇ ತರಗತಿಗೆ ತಮ್ಮ ಮಕ್ಕಳನ್ನು ನೋಂದಣಿ ಮಾಡಬಹುದು ಎಂದು ಸೂಚಿಸಿದೆ.

ಶಿಕ್ಷಕರಿಗೆ ತರಬೇತಿ: ಆಂಗ್ಲ ಮಾಧ್ಯಮ ಶಿಕ್ಷಣ ಒದಗಿಸಲಿರುವ ಶಾಲೆಗಳ ಒಂದರಿಂದ ಐದನೇ ತರಗತಿ ತನಕದ ದ.ಕ.ಜಿಲ್ಲೆಯ 63 ಶಿಕ್ಷಕರಿಗೆ ಮಂಗಳೂರು ಡಯಟ್‌ನಲ್ಲಿ 15 ದಿನಗಳ ವಿಶೇಷ ತರಬೇತಿಯನ್ನೂ ನೀಡಲಾಗುತ್ತಿದೆ. ಅಲ್ಲದೆ ಅತಿಥಿ ಶಿಕ್ಷಕರ ನೆರವು ಪಡೆಯಲು ಕೂಡ ಅವಕಾಶ ನೀಡಲಾಗಿದೆ. ಸರಕಾರಿ ಶಾಲೆಗಳಿಲ್ಲದ ಪ್ರದೇಶಗಳಲ್ಲಿ ಮಾತ್ರ ಆರ್‌ಟಿಇ(ಶಿಕ್ಷಣ ಹಕ್ಕು ಕಾಯ್ದೆ)ಯೋಜನೆಯಡಿ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಖಾಸಗಿ ಶಾಲೆಗಳಲ್ಲಿ ಉಚಿತ ಪ್ರವೇಶ ಎಂದು ನಿಯಮ ರೂಪಿಸಿದ ಕಾರಣ ರಾಜ್ಯ ಸರಕಾರ ಮಕ್ಕಳ ಹೆತ್ತವರ ಬೇಡಿಕೆಯಂತೆ ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿಗಳನ್ನು ಆರಂಭಿಸಲು ಮುಂದಾಗಿದೆ.

13 ಪಬ್ಲಿಕ್ ಸ್ಕೂಲ್: ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ ನೀಡಲು ದ.ಕ.ಜಿಲ್ಲೆಯ 10 ಶಾಲೆಗಳನ್ನು ಆಯ್ಕೆ ಮಾಡಲಾಗಿದ್ದು, ಅದಕ್ಕೆ ಕರ್ನಾಟಕ ಪಬ್ಲಿಕ್ ಸ್ಕೂಲ್(ಕೆಪಿಎಸ್) ಎಂದು ನಾಮಕಾರಣ ಮಾಡಲಾಗಿದೆ. ಈ ಬಗ್ಗೆ ರಾಜ್ಯ ಸರಕಾರ ಅಧಿಕೃತ ಅನುಮತಿಯನ್ನೂ ನೀಡಿದೆ. ಆಂಗ್ಲ ಮಾಧ್ಯಮ ಶಾಲೆಗಳ ಪಟ್ಟಿಯಲ್ಲಿರುವ ಕೆಲವು ಶಾಲೆಗಳನ್ನೂ ಕೂಡ ಈ ಪಬ್ಲಿಕ್ ಶಾಲೆಗಳ ಪಟ್ಟಿಯಲ್ಲಿ ಸೇರಿಸಲಾಗಿದೆ.

ರಾಜ್ಯ ಸರಕಾರದ ಸೂಚನೆಯಂತೆ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಪ್ರಥಮ ಹಂತದಲ್ಲಿ ಸರಕಾರ ಅನುಮೋದನೆ ನೀಡಿರುವ ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿಗಳನ್ನು ನಡೆಸಲು ಸಿದ್ಧತೆ ನಡೆದಿದೆ. ಈ ಹೊಸ ಯೋಜನೆಯಿಂದ ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಯ ಏರಿಕೆಯಾಗುವ ವಿಶ್ವಾಸವಿದೆ.

-ವೈ.ಶಿವರಾಮಯ್ಯ, ಡಿಡಿಪಿಐ, ದ.ಕ. ಜಿಲ್ಲೆ

ಆಂಗ್ಲ ಮಾಧ್ಯಮ ಶಿಕ್ಷಣ ಆರಂಭಿಸಲಿರುವ ಸರಕಾರಿ ಶಾಲೆಗಳ ಶಿಕ್ಷಕ-ಶಿಕ್ಷಕಿಯರಿಗೆ ತರಬೇತಿ ನೀಡಲಾಗುತ್ತದೆ. ಶಿಕ್ಷಕರು ತರಬೇತಿ ಪಡೆಯುವುದರಿಂದ ಶಾಲೆಗಳಿಗೆ ನುರಿತ ಶಿಕ್ಷಕರು ಸಿಗಲಿದ್ದಾರೆ. ಅದರ ಪ್ರಯೋಜನ ವಿದ್ಯಾರ್ಥಿಗಳ ಮೇಲಾದರೆ ಭವಿಷ್ಯದಲ್ಲಿ ಸರಕಾರಿ ಶಾಲೆಗಳು ಅಭಿವೃದ್ಧಿಗೊಳ್ಳಲಿದೆ.

-ಗುರುಪ್ರಸಾದ್, ನೋಡಲ್ ಅಧಿಕಾರಿ, ಆಂಗ್ಲ ಶಿಕ್ಷಣ ತರಗತಿ, ದ.ಕ.

ಆಂಗ್ಲ ಮಾಧ್ಯಮ ತರಗತಿ ನಡೆಸಲಾಗುವ ಸರಕಾರಿ ಶಾಲೆಗಳ ಪಟ್ಟಿ

ಬಂಟ್ವಾಳ

ಮಾ.ಹಿ.ಪ್ರಾ.ಶಾಲೆ ಕನ್ಯಾನ

ಮಾ.ಹಿ.ಪ್ರಾ.ಶಾಲೆ ವಿಟ್ಲ

ಹಿ.ಪ್ರಾ. ಶಾಲೆ ನಾರ್ಶ ಮೈದಾನ

ಹಿ.ಪ್ರಾ. ಶಾಲೆ ಸುರಿಬೈಲು

ಹಿ.ಪ್ರಾ. ಶಾಲೆ ಪುದು

ಹಿ.ಪ್ರಾ. ಶಾಲೆ ದಡ್ಡಲಕಾಡು

ಹಿ.ಪ್ರಾ. ಶಾಲೆ ಕಲ್ಲರಕೋಡಿ

ಹಿ.ಪ್ರಾ.ಶಾಲೆ ಕನ್ಯಾನ

ಸುಳ್ಯ

ಹಿ.ಪ್ರಾ.ಶಾಲೆ ಗುತ್ತಿಗಾರು ಹಿಪ್ರಾ.ಶಾಲೆ ಅಜ್ಜಾವರ

ಜಿಯುಪಿಎಸ್ ಕಾಲೇಜು ಗಾಂಧಿನಗರ

ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆ

ಹಿ.ಪ್ರಾ.ಶಾಲೆ ಸಂಪಾಜೆ

ಮಂಗಳೂರು ದಕ್ಷಿಣ

ಹಿ.ಪ್ರಾ.ಶಾಲೆ ದೇರಳಕಟ್ಟೆ ಹಿ.ಪ್ರಾ.ಶಾಲೆ ಮುನ್ನೂರು

ಹಿ.ಪ್ರಾ.ಶಾಲೆ ಅಂಬ್ಲಮೊಗರು

ಹಿ.ಪ್ರಾ.ಶಾಲೆ ಮಳಲಿ

ಹಿ.ಪ್ರಾ.ಶಾಲೆ ಕುಂಪಲ

ಹಿ.ಪ್ರಾ. ಶಾಲೆ ಮುತ್ತೂರು

ಪ್ರೌಢಶಾಲೆ ತಲಪಾಡಿ ಪಟ್ನ

ಹಿ.ಪ್ರಾ.ಶಾಲೆ ಬಲ್ಮಠ

ಹಿ.ಪ್ರಾ. ಶಾಲೆ ಅತ್ತಾವರ

ಹಿ.ಪ್ರಾ.ಶಾಲೆ ಮಲ್ಲಿಕಟ್ಟೆ

ಬೆಳ್ತಂಗಡಿ

ಹಿ.ಪ್ರಾ. ಶಾಲೆ ನಾರಾವಿ

ಮಾ.ಹಿ.ಪ್ರಾ.ಶಾಲೆ ಬೆಳ್ತಂಗಡಿ ಹಿ.ಪ್ರಾ. ಶಾಲೆ ಪೂಂಜಾಲಕಟ್ಟೆ

ಹಿ.ಪ್ರಾ. ಶಾಲೆ ಸರಳಿಕಟ್ಟೆ

ಹಿ.ಪ್ರಾ. ಶಾಲೆ ಬದನಾಜೆ

ಪುತ್ತೂರು

ಹಿ.ಪ್ರಾ.ಶಾಲೆ ಕೊಣಾಲು

ಪ.ಪೂ.ಕಾಲೇಜು ಕೆಯ್ಯೂರು

ಹಿ.ಪ್ರಾ.ಶಾಲೆ ಕುಂಬ್ರ

ಹಿ.ಪ್ರಾ.ಶಾಲೆ ಬೊಳಂತಿಮೊಗರು

ಹಿ.ಪ್ರಾ.ಶಾಲೆ ಉಪ್ಪಿನಂಗಡಿ

ಮೂಡುಬಿದಿರೆ

ಹಿ.ಪ್ರಾ.ಶಾಲೆ ಮಿಜಾರು

ಹಿ.ಪ್ರಾ.ಶಾಲೆ ನೀರ್ಕರೆ

ಮಂಗಳೂರು ಉತ್ತರ

ಹಿ.ಪ್ರಾ.ಶಾಲೆ ಕಾವೂರು

ಹಿ.ಪ್ರಾ. ಹಾಗೂ ಪ್ರೌಢಶಾಲೆ ಮುಲ್ಲಕಾಡು

ಹಿ.ಪ್ರಾ.ಶಾಲೆ ಕೊಳವೂರು ಪ್ರೌಢಶಾಲೆ ಕಾಟಿಪಳ್ಳ 5ನೇ ಬ್ಲಾಕ್

ಹಿ.ಪ್ರಾ. ಪ್ರೌಢ ಮಾದರಿ ಶಾಲೆ ಕೆ.ಎಸ್.ರಾವ್ ನಗರ

ಹಿ.ಪ್ರಾ.ಶಾಲೆ ಮೂಡುಶೆಡ್ಡೆ

ಹಿ.ಪ್ರಾ.ಶಾಲೆ ಬೆಂಗ್ರೆ ಕಸಬ

Writer - ಹಂಝ ಮಲಾರ್

contributor

Editor - ಹಂಝ ಮಲಾರ್

contributor

Similar News