ಭಾರತದಲ್ಲೇ ಮೊದಲು: ಈ ರಾಜ್ಯದಲ್ಲಿ ಖಾಸಗಿ ಉದ್ಯೋಗದಲ್ಲಿ ಸ್ಥಳೀಯರಿಗೆ ಶೇ.75 ಮೀಸಲಾತಿ !
Update: 2019-07-23 06:40 GMT
ವಿಜಯವಾಡ, ಜು.23: ಆಂಧ್ರಪ್ರದೇಶ ಸರಕಾರ ದೇಶದಲ್ಲಿ ಮೊದಲ ಬಾರಿ ಸ್ಥಳೀಯರಿಗೆ ಖಾಸಗಿ ಉದ್ಯೋಗಗಳಲ್ಲಿ ಶೇ.75ರಷ್ಟು ಮೀಸಲಾತಿ ಕಲ್ಪಿಸುವ ಮಹತ್ವದ ನಿರ್ಧಾರ ಕೈಗೊಂಡಿದೆ.
ಸರಕಾರದಿಂದ ಆರ್ಥಿಕ ಸಹಾಯ ಪಡೆಯುವ ಹಾಗೂ ಪಡೆಯದೇ ಇರುವ ಎಲ್ಲ ಕೈಗಾರಿಕಾ ಘಟಕಗಳು, ಫ್ಯಾಕ್ಟರಿಗಳು ಹಾಗೂ ಕಂಪನಿಗಳು ಸ್ಥಳೀಯರಿಗೆ ಶೇ.75ರಷ್ಟು ಮೀಸಲಾತಿ ಕಲ್ಪಿಸಬೇಕೆಂಬ ಕಾಯ್ದೆಯನ್ನು ಸೋಮವಾರ ಆಂಧ್ರಪ್ರದೇಶ ವಿಧಾನಸಭೆಯಲ್ಲಿ ಅಂಗೀಕರಿಸಲಾಗಿದೆ.
ಎಲ್ಲ ರಾಜ್ಯಗಳು ಸ್ಥಳೀಯರಿಗೆ ಖಾಸಗಿ ಉದ್ಯೋಗ ನೀಡಲು ಮೀಸಲಾತಿ ಕಲ್ಪಿಸುತ್ತೇವೆಂದು ಭರವಸೆ ನೀಡುತ್ತಿವೆ. ಆದರೆ, ಆ ನಿಟ್ಟಿನಲ್ಲಿ ಯಾವುದೇ ದಿಟ್ಟ ಹೆಜ್ಜೆಯನ್ನು ಇಟ್ಟಿಲ್ಲ. ಖಾಸಗಿ ಸೆಕ್ಟರ್‌ನಲ್ಲಿ ಸ್ಥಳೀಯರಿಗೆ ಶೇ.70ರಷ್ಟು ಉದ್ಯೋಗ ನೀಡಲು ಕಾನೂನು ತರುವುದಾಗಿ ಮಧ್ಯಪ್ರದೇಶ ಸರಕಾರ ಜು.9ರಂದು ಹೇಳಿಕೆ ನಿಡಿತ್ತು.