ಅಬ್ಬೂಕಾಕನ ಕಾಫಿ!
Update: 2019-07-31 19:13 GMT
ಗೂಡಂಗಡಿಯ ಅಬ್ಬೂಕಾಕ ಅಚ್ಚರಿಯಿಂದ ಕೇಳಿದರು
‘‘ಜನರಿಂದ ಒಂದು ಕಾಫಿಗೆ ಹತ್ತು ರೂಪಾಯಿ ಪಡೆಯುವ ನಾನು ಲಾಭದಲ್ಲಿದ್ದೇನೆ. ಹೀಗಿರುವಾಗ, 200 ರೂಪಾಯಿಗೆ ಕಾಫಿ ಕೊಡುವ ಅವರು ಲಾಸ್ ಆದದ್ದು ಹೇಗೆ?’’
ಅಂದಿನ ಪೇಪರ್ ಓದುತ್ತಾ ಕಾಫಿ ಕುಡಿಯುತ್ತಿದ್ದ ಆತ ಕೇಳಿದ ‘‘ಅಬ್ಬುಕಾಕ, ನಿಮ್ಮ ಗೂಡಂಗಡಿಗೆ ಯಾವತ್ತಾದರೂ ಐಟಿ ರೈಡ್ ಆಗಿದಾ?’’
‘‘ಅದೆಂತ ಹಾಗೆಂದರೆ?’’
‘‘ಮೊನ್ನೆ ನಿಮ್ಮ ಗೂಡಂಗಡಿಗೆ ಕಳ್ಳರು ನುಗ್ಗಿದರಲ್ಲ ಹಾಗೆಯೇ ಇದು. ಹತ್ತು ರೂಪಾಯಿಯ ಕಾಫಿ ಮಾರುವವನ ಅಂಗಡಿಗೆ ಕಳ್ಳರು ನುಗ್ಗಿದರೆ, 200 ರೂಪಾಯಿಗೆ ಕಾಫಿ ಮಾರುವವನ ಅಂಗಡಿಗೆ ಐಟಿಯವರು ನುಗ್ಗುತ್ತಾರೆ....’’
‘‘ಆದರೆ ನನ್ನ ಗೂಡಂಗಡಿ ನಾನು ಮುಚ್ಚಿಲ್ಲವಲ್ಲ?’’
‘‘ನುಗ್ಗಿದ್ದು ಕಳ್ಳರಲ್ವ? ಐಟಿಯವರಲ್ಲವಲ್ಲ?’’
-ಮಗು