ಅಮೆರಿಕದ 16 ವಿಧದ ಉತ್ಪನ್ನಗಳಿಗೆ ಸುಂಕ ವಿನಾಯಿತಿ: ಚೀನಾ

Update: 2019-09-11 16:55 GMT

ಬೀಜಿಂಗ್, ಸೆ. 11: ಅಮೆರಿಕದಿಂದ ಆಮದು ಮಾಡಿಕೊಳ್ಳುವ 16 ವಿಧದ ಉತ್ಪನ್ನಗಳನ್ನು ಆಮದು ತೆರಿಗೆಯ ವ್ಯಾಪ್ತಿಯಿಂದ ಒಂದು ವರ್ಷದ ಅವಧಿಗೆ ಹೊರಗಿಡಲಾಗುವುದು ಎಂದು ಚೀನಾ ಬುಧವಾರ ಪ್ರಕಟಿಸಿದೆ.

ಮುಂದಿನ ತಿಂಗಳು ಚೀನಾ ಮತ್ತು ಅಮೆರಿಕಗಳ ನಡುವೆ ನಡೆಯಲಿರುವ ಹೊಸ ಸುತ್ತಿನ ಮಾತುಕತೆಗಳಿಗೆ ಪೂರ್ವಭಾವಿಯಾಗಿ ಚೀನಾ ಈ ವಿನಾಯಿತಿಯನ್ನು ಘೋಷಿಸಿದೆ.

ಒಂದು ವರ್ಷದಿಂದ ವ್ಯಾಪಾರ ಸಮರದಲ್ಲಿ ತೊಡಗಿರುವ ಚೀನಾ ಮತ್ತು ಅಮೆರಿಕ ದೇಶಗಳು, ಈಗಾಗಲೇ ಪರಸ್ಪರರ ವಿರುದ್ಧ ನೂರಾರು ಬಿಲಿಯ ಡಾಲರ್ ದಂಡನಾ ಶುಲ್ಕಗಳನ್ನು ವಿಧಿಸಿವೆ.

ಪ್ರಸಕ್ತ ಚಾಲ್ತಿಯಲ್ಲಿರುವ ವ್ಯಾಪಾರ ಸಮರದ ಬಗ್ಗೆ ಉಭಯ ದೇಶಗಳ ನಡುವೆ ಉನ್ನತ ಮಟ್ಟದ ಮಾತುಕತೆಗಳನ್ನು ಅಕ್ಟೋಬರ್‌ನಲ್ಲಿ ನಡೆಸಲು ವಾಶಿಂಗ್ಟನ್ ಮತ್ತು ಬೀಜಿಂಗ್ ಒಪ್ಪಿಕೊಂಡಿವೆ ಎಂದು ಚೀನಾದ ವಾಣಿಜ್ಯ ಸಚಿವಾಲಯ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News