ಕೊರೋನ ವೈರಸ್ ನಿಯಂತ್ರಣ ಯೋಜನೆ: 15,000 ಕೋಟಿ ರೂ. ಘೋಷಿಸಿದ ಪ್ರಧಾನಿ ಮೋದಿ
Update: 2020-03-24 15:13 GMT
ಹೊಸದಿಲ್ಲಿ: ಕೊರೋನ ವೈರಸ್ ಹಿನ್ನೆಲೆಯಲ್ಲಿ ದೇಶವನ್ನುದ್ದೇಶಿಸಿ ಇಂದು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ದೇಶದ ಆರೋಗ್ಯ ಕ್ಷೇತ್ರವನ್ನು ಬಲಪಡಿಸಲು 15 ಸಾವಿರ ಕೋಟಿ ರೂ.ಗಳನ್ನು ಘೋಷಿಸಿದ್ದಾರೆ.
"ದೇಶದ ಆರೋಗ್ಯ ಕ್ಷೇತ್ರವನ್ನು ಬಲಪಡಿಸಲು ಕೇಂದ್ರ ಸರಕಾರವು 15 ಸಾವಿರ ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಲಿದೆ. ಕೊರೋನ ವೈರಸ್ ಸಂಬಂಧಿತ ಪರೀಕ್ಷಾ ವ್ಯವಸ್ಥೆಗಳು, ವೈಯಕ್ತಿಕ ರಕ್ಷಣಾ ಸಾಧನಗಳು, ಐಸೊಲೇಶನ್ ಬೆಡ್ ಗಳು, ಐಸಿಯು ಬೆಡ್ ಗಳು ಮತ್ತು ವೆಂಟಿಲೇಟರ್ ಗಳು ಇದರಲ್ಲಿ ಒಳಗೊಂಡಿವೆ" ಎಂದವರು ಹೇಳಿದರು.