ಕೋವಿಡ್ -19: ದೇಶದಲ್ಲಿ ನಿರ್ಗತಿಕರಿಗೆ 21 ಸಾವಿರ ಶಿಬಿರ

Update: 2020-03-31 19:00 GMT

ಹೊಸದಲ್ಲಿ, ಮಾ.31: ದೇಶದಲ್ಲಿ 21,064 ಪರಿಹಾರ ಶಿಬಿರಗಳನ್ನು ಪ್ರಾರಂಭಿಲಾಗಿದ್ದು, 6.6 ಲಕ್ಷಕ್ಕೂ ಹೆಚ್ಚು ನಿರ್ಗತಿಕರು ಮತ್ತು ಕೋವಿಡ್ -19 ಲಾಕ್‌ಡೌನ್‌ನಿಂದಾಗಿ ಸಿಲುಕಿಕೊಂಡವರಿಗೆ ಆಶ್ರಯ ನೀಡಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಮಂಗಳವಾರ ತಿಳಿಸಿದೆ.

ದೇಶದಲ್ಲಿ 16 ಕೊನೋರ ವೈರಸ್ ಸೋಂಕಿತ ಹಾಟ್‌ಸ್ಪಾಟ್‌ಗಳನ್ನು ಗುರುತಿಸಿದೆ. ಅವುಗಳ ವಿವರ ಇಂತಿವೆ. ದಿಲ್ಲಿಯ ದಿಲ್ಶದ್ ಗಾರ್ಡನ್ ಮತ್ತು ನಿಝಾಮುದ್ದೀನ್, ಕೇರಳದ ಪಟ್ಟಣಂತಿಟ್ಟ ಮತ್ತು ಕಾಸರಗೋಡು, ಉತ್ತರಪ್ರದೇಶದ ಮೀರತ್ ಮತ್ತು ನೊಯ್ಡಾ, ರಾಜಸ್ಥಾನದ ಭಿಲ್ವಾರ ಮತ್ತು ಜೈಪುರ, ಮಹಾರಾಷ್ಟ್ರದ ಮುಂಬೈ ಹಾಗೂ ಪುಣೆ, ಗುಜರಾತ್‌ನ ಅಹ್ಮದಾಬಾದ್, ಮಧ್ಯಪ್ರದೇಶದ ಇಂದೋರ್, ಪಂಜಾಬ್‌ನ ನವಾನ್‌ಶಹರ್, ಕರ್ನಾಟಕದ ಬೆಂಗಳೂರು, ತಮಿಳುನಾಡಿನ ಈರೋಡ್ , ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು.

ಮಂಗಳವಾರ ಕನಿಷ್ಟ 10 ಕೋವಿಡ್ -19 ಸಾವು ಪ್ರಕರಣಗಳು ದಾಖಲಾಗಿವೆ. ತೆಲಂಗಾಣದಲ್ಲಿ 6 ಪ್ರಕರಣಗಳು ದಾಖಲಾಗಿವೆ. ಇವರೆಲ್ಲಾ ರಾಜಧಾನಿ ದಿಲ್ಲಿಯ ನಿಝಾಮುದ್ದೀನ್‌ನಲ್ಲಿ ಮಾರ್ಚ್ ಆರಂಭದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ವಾಪಸಾದವರು ಎನ್ನಲಾಗಿದೆ.

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಮನ್ವಯದೊಂದಿಗೆ ದೇಶದಲ್ಲಿ ಲಾಕ್‌ಡೌನ್ ಜಾರಿಗೊಳಿಸಿರುವುದನ್ನು ಗೃಹ ಸಚಿವಾಲಯವು ನಿರಂತರವಾಗಿ ಗಮನಿಸುತ್ತಿದೆ ಮತ್ತು ಇದುವರೆಗಿನ ಪರಿಸ್ಥಿತಿ ತೃಪ್ತಿಕರವಾಗಿದೆ ಎಂದು ಮಾಹಿತಿ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News