ಕೊಹ್ಲಿ, ತೆಂಡುಲ್ಕರ್ ಸಹಿತ 40 ಕ್ರೀಡಾಪಟುಗಳೊಂದಿಗೆ ಪ್ರಧಾನಿ ಮೋದಿ ಸಭೆ

Update: 2020-04-03 07:24 GMT

ಹೊಸದಿಲ್ಲಿ,ಎ.3: ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ಸಚಿನ್ ತೆಂಡುಲ್ಕರ್, ಸೌರವ್ ಗಂಗುಲಿ ಹಾಗೂ ಮೇರಿಕೋಮ್ ಸಹಿತ ದೇಶದ 40 ಪ್ರಮುಖ ಕ್ರೀಡಾಳುಗಳ ಜೊತೆಗೆ ಕೊರೋನ ವೈರಸ್‌ನಿಂದಾಗಿ ದೇಶದಲ್ಲಿ ಈಗಿನ ಪರಿಸ್ಥಿತಿಯ ಕುರಿತು ವೀಡಿಯೊ ಕಾನ್ಫರೆನ್ಸ್ ಮೂಲಕ  ಪ್ರಧಾನಿ ಮೋದಿ ಸಭೆ ನಡೆಸಿದರು. ಕೊರೋನವೈರಸ್ ಹರಡುವುದನ್ನು ತಡೆಯಲು ಮಾ.24ರಂದು ದೇಶಾದ್ಯಂತ 21 ದಿನಗಳ ಲಾಕ್‌ಡೌನ್ ಜಾರಿಗೆ ತಂದ ಬಳಿಕ ಮೊದಲ ಬಾರಿ ಪ್ರಧಾನಿ ಮೋದಿ ದೇಶದ ಕ್ರೀಡಾಪಟುಗಳೊಂದಿಗೆ ಸಂವಹನ ನಡೆಸಿದರು.

ಸಭೆಯಲ್ಲಿ ಪಿ.ಟಿ.ಉಷಾ,ಪುಲ್ಲೇಲ ಗೋಪಿಚಂದ್, ವಿಶ್ವನಾಥನ್ ಆನಂದ್, ಹಿಮಾ ದಾಸ್,ಬಜರಂಗ್ ಪೂನಿಯ, ಪಿ.ವಿ.ಸಿಂಧು, ರೋಹಿತ್ ಶರ್ಮಾ, ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್ ಹಾಗೂ ಚೇತೇಶ್ವರ ಪೂಜಾರ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News