ಹುಟ್ಟುಹಬ್ಬ ಆಚರಿಸಿ ಬಿಜೆಪಿ ಶಾಸಕನಿಂದ ಲಾಕ್‌ಡೌನ್ ನಿಯಮ ಉಲ್ಲಂಘನೆ

Update: 2020-04-05 18:05 GMT
Photo: facebook

ಮುಂಬೈ, ಎ.5: ಮಹಾರಾಷ್ಟ್ರದ ವಾರ್ಧಾ ಜಿಲ್ಲೆಯ ಬಿಜೆಪಿ ಶಾಸಕ ದಾದಾರಾವ್ ಕೆಚೆ ರವಿವಾರ ತನ್ನ ಜನ್ಮದಿನಾಚರಣೆಯ ಅಂಗವಾಗಿ ನಿವಾಸದಲ್ಲಿ ಜನರಿಗೆ ಪಡಿತರ ಸಾಮಗ್ರಿ ವಿತರಿಸುವ ಮೂಲಕ ಲಾಕ್‌ಡೌನ್ ನಿಯಮ ಉಲ್ಲಂಘಿಸಿದ್ದಾರೆ ಎಂದು ವರದಿಯಾಗಿದೆ. ಉಪವಿಭಾಗೀಯ ಅಧಿಕಾರಿ ಹರೀಶ್ ಧಾರ್ಮಿಕ್ ಪ್ರಕರಣವನ್ನು ದೃಢಪಡಿಸಿದ್ದು, ಶಾಸಕನ ವಿರುದ್ಧ ಸಾಂಕ್ರಾಮಿಕ ರೋಗ ಅಧಿನಿಯಮದಡಿ ಪ್ರಕರಣ ದಾಖಲಿಸಲಾಗುವುದು ಎಂದಿದ್ದಾರೆ.

ಆಹಾರಧಾನ್ಯ ಪಡೆಯಲು ಶಾಸಕರ ಮನೆಯೆದುರು ಕನಿಷ್ಟ 100 ಜನ ಸೇರಿದ್ದರು. ಆಹಾರ ಹಂಚಲು ಜಿಲ್ಲಾಡಳಿತದಿಂದ ಯಾವುದೇ ಅನುಮತಿ ಪಡೆದಿರಲಿಲ್ಲ ಎಂದವರು ಹೇಳಿದ್ದಾರೆ. ಬಳಿಕ ಪೊಲೀಸರು ಸ್ಥಳಕ್ಕೆ ತೆರಳಿ ಜನರನ್ನು ಚದುರಿಸಿದ್ದಾರೆ. ಆದರೆ ಶಾಸಕ ದಾದಾರಾವ್ ವರದಿಯನ್ನು ನಿರಾಕರಿಸಿದ್ದು , ಇದು ರಾಜಕೀಯ ವಿರೋಧಿಗಳ ಷಡ್ಯಂತ್ರ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News