ಲಾಕ್ ಡೌನ್ ನಿಂದ ವಾಹನಗಳಿಲ್ಲ: ಹಿಂದೂ ಮಹಿಳೆಯ ಮೃತದೇಹ ಹೊತ್ತು ನಡೆದ ಮುಸ್ಲಿಂ ಯುವಕರು

Update: 2020-04-07 17:56 GMT

ಹೊಸದಿಲ್ಲಿ: ಲಾಕ್ ಡೌನ್ ನಿಂದಾಗಿ ಯಾವುದೇ ವಾಹನಗಳು ಇಲ್ಲದ ಕಾರಣ ಹಿಂದೂ ಮಹಿಳೆಯೊಬ್ಬರ ಮೃತದೇಹವನ್ನು ನೆರೆಮನೆಯ ಮುಸ್ಲಿಂ ಯುವಕರು ರುಧ್ರಭೂಮಿಯವರೆಗೆ ಹೊತ್ತು ನಡೆದ ಘಟನೆ ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದಿದೆ.

ಕೊರೋನ ವೈರಸ್ ಭೀತಿಯಿಂದ ಮಹಿಳೆಯ ಹೆಚ್ಚಿನ ಸಂಬಂಧಿಕರು ಅಂತ್ಯಸಂಸ್ಕಾರದಲ್ಲಿ ಭಾಗವಹಿಸದೇ ಇದ್ದ ಕಾರಣ ಮುಸ್ಲಿಂ ಯುವಕರು ಅಂತ್ಯಸಂಸ್ಕಾರ ನಡೆಸಲೂ ನೆರವಾದರು. ಈ ಯುವಕರು ಮಹಿಳೆಯ ಮೃತದೇಹ ಹೊತ್ತು ನಡೆಯುತ್ತಿರುವ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಮಾಸ್ಕ್ ಧರಿಸಿದ್ದ ಈ ಯುವಕರು ಅಂತ್ಯಸಂಸ್ಕಾರಕ್ಕೆ ಎಲ್ಲಾ ಸಿದ್ಧತೆಗಳನ್ನು ನಡೆಸಿ ನಂತರ ಮೃತದೇಹವನ್ನು ಹೊತ್ತು 2.5 ಕಿ.ಮೀ. ನಡೆದರು. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆ ಸೋಮವಾರ ಮೃತಪಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News